ಮೈಸೂರು

ದೂರುದಾರರು ನೀಡಿರುವ ದೂರುಗಳು ಸತ್ಯಕ್ಕೆ ದೂರ : ನೋಟೀಸನ್ನು ಕೈಬಿಡುವಂತೆ ಮನವಿ ಜೊತೆ ಸ್ಪಷ್ಟೀಕರಣ

ಮೈಸೂರು,ಜೂ.6:- ಕೋವಿಡ್-19(ಕೊರೋನಾ ವೈರಾಣು)ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ನೌಕರರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಡವರಿಗೆ ಮೋಸ/ವಂಚನೆ ಎಸಗಿರುವ ಕುರಿತು ಪಾಲಿಕೆ ಆಯುಕ್ತರು ಶೋಕಾಸ್ ನೋಟೀಸ್ ನೀಡಿದ್ದು, ಅದಕ್ಕೆ ಮೈಸೂರು ಮಹಾನಗರ ಪಾಲಿಕೆ ಎಸ್ಸಿ ಎಸ್ಟಿ ನೌಕರ ಸಂಘದ ಗೌರವ ಅಧ್ಯಕ್ಷ  ಮತ್ತು ಮಾಜಿ ಮಹಾಪೌರರಾದ   ಪುರುಷೋತ್ತಮ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಅವರು  ತಮ್ಮ ಕಛೇರಿಯ ಉಲ್ಲೇಖಿತ ನೋಟೀಸ್‌ನ್ನು ನನಗೆ ಜಾರಿ ಮಾಡಿದ್ದು, ಸಂಸ್ಥೆಯ ಏಳಿಗೆಯನ್ನು ಸಹಿಸದ ಪಟ್ಟಭದ್ರರು ನೀಡಿರುವ ದೂರು ಸತ್ಯಕ್ಕೆ ದೂರವಾಗಿರುತ್ತದೆ.   14.04.2020 ರಂದು ಮೈಸೂರು ಮಹಾನಗರ ಪಾಲಿಕೆ ಎಸ್‌ಸಿ/ಎಸ್‌ಟಿ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಹಾಗೂ ಕೋವಿಡ್19 ತೊಂದರೆಗೆ ಒಳಗಾದ ಬಡ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸುವಂತೆ ಸಂಘದ ಗೌರವಾಧ್ಯಕ್ಷರು, ಪದಾಧಿಕಾರಿಗಳು ನಿರ್ಣಯಿಸಿರುವಂತೆ ಸಂಘದ ಸದಸ್ಯರಾದ ನಮ್ಮಗಳ ವೈಯುಕ್ತಿಕ ಹಾಗೂ ಗೌರವಾಧ್ಯಕ್ಷರ ಅನುದಾನದಿಂದ ಕಿಟ್‌ಗಳನ್ನು ಖರೀದಿಸಿ ಸಂಘದ ಸದಸ್ಯರ ವಾಹನಗಳಲ್ಲಿ ಬಡವರಿಗೆ ಕಿಟ್‌ಗಳನ್ನು ವಿತರಣೆ ಮಾಡಿ ಸಾರ್ವಜನಿಕ ಕಾಳಜಿ ವಹಿಸಿರುತ್ತೇವೆ ಮತ್ತು ವಿತರಣೆಯನ್ನು ಸಂಘದ ಗೌರವಾಧ್ಯಕ್ಷರು ಹಾಗೂ ಸದಸ್ಯರ ಒಪ್ಪಿಗೆ ಮತ್ತು ಮಾರ್ಗದರ್ಶನದಂತೆ ಕಿಟ್‌ಗಳನ್ನು ವಿತರಿಸಿರುತ್ತೇವೆ.

ಈ ಕಾರ್ಯಕ್ರಮವು ಡಾ. ಬಿ.ಆರ್. ಅಂಬೇಡ್ಕರ್‌ರವರ ಜಯಂತಿಯ ವಿಶೇಷವಾಗಿ ಆಚರಿಸಿರುತ್ತೇವೆ. ಈ ಕೆಲಸ ಸಂಘದ ಹಾಗೂ ನಗರ ಪಾಲಿಕೆಗೆ ಎಸ್‌ಸಿ/ಎಸ್‌ಟಿ ನೌಕರರುಗಳ ಪ್ರಶಂಸೆಗೆ ಪಾತ್ರವಾಗಿರುತ್ತದೆ. ಈ ಕಾರ್ಯಕ್ರಮ ಮೈಸೂರು ಮಹಾನಗರ ಪಾಲಿಕೆ ಎಸ್‌ಸಿ/ಎಸ್‌ಟಿ ನೌಕರ ಸಂಘದ ಕಾರ್ಯಕ್ರಮವಾಗಿರುವುದರಿಂದ ನಾನು ಸಹ ಸದರಿ ಸಂಘದ ಸದಸ್ಯನಾಗಿರುವುದರಿಂದ ಸಂಘದ ಗೌರವಾಧ್ಯಕ್ಷರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಕ್ರಮವಹಿಸಿರುತ್ತೇನೆಯೇ ಹೊರತು ವೈಯುಕ್ತಿಕ ಅಭಿಪ್ರಾಯವಿರುವುದಿಲ್ಲ. ದೂರುದಾರರು ನೀಡಿರುವ ದೂರುಗಳು ಸತ್ಯಕ್ಕೆ ದೂರವಾಗಿರುತ್ತದೆ. ಆದ್ದರಿಂದ ಈ ನೋಟೀಸನ್ನು ಕೈಬಿಡಬೇಕೆಂದು ಕೋರಿಕೊಳ್ಳುತ್ತೇನೆ.

ಮೈಸೂರು ಮಹಾನಗರ ಪಾಲಿಕೆ ಎಸ್‌ಸಿ/ಎಸ್‌ಟಿ ನೌಕರರ ಸಂಘದ ವತಿಯಿಂದ ಇನ್ನೂ ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಉತ್ತಮ ಸಂಘದ ನೌಕರರ ಒಳಿತಿನ ಕಾರ್ಯಕ್ರಮಗಳಿಗೆ ತಮ್ಮ ಮಾನವೀಯ ಸಹಕಾರ ಕೋರುತ್ತೇನೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: