ಮೈಸೂರು

 ರಕ್ತಪಾತವಾದರೂ ಸರಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮಾಡಲು ಬಿಡಲ್ಲ : ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಕೆ

ಮೈಸೂರು,ಜೂ.6:-  ರಕ್ತಪಾತವಾದರೂ ಸರಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮಾಡಲು ಬಿಡಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್  ಎಚ್ಚರಿಕೆ ನೀಡಿದರು.

ಮೈಸೂರು ಜಲದರ್ಶಿನಿಯಲ್ಲಿಂದು ವಿವಿಧ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಏನು ಇಲ್ಲ. ಅವರು ದಿವಾನರಾಗಿದ್ದರು, ಕನ್ನಂಬಾಡಿ ಕಟ್ಟಲು ಇಂಜಿನೀಯರ್ ಆಗಿದ್ದರು ಅಷ್ಟೇ. ಅವರ ಕೆಲಸಕ್ಕೆ ಸಂಬಳ ಪಡೆದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜೊತೆ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡೋದು ಬೇಡ ಎಂದರು.

ಒಡೆಯರ್ ಪ್ರತಿಮೆ ಜೊತೆ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡೋದು ಕೆಟ್ಟ ಸಂಪ್ರಾದಾಯ. ಇದು ರಾಜ ಮನೆತನಕ್ಕೆ ಮಸಿ ಬಳಿಯುವ ಕಾರ್ಯ. ವಿಶ್ವೇಶ್ವರಯ್ಯ ಹೆಸರು ಇಷ್ಟೊಂದು ಪ್ರಸಿದ್ಧಿ ಆಗಿರುವ ಬಗ್ಗೆ ಗೊಂದಲವಿದೆ. ಮಿರ್ಜಾ ಇಸ್ಮಾಯಿಲ್ ಇವರಿಗಿಂತ ಹೆಚ್ಚು ದಿನ ದಿವಾನರಾಗಿದ್ರು, ಆದರೂ ಇವರ ಹೆಸರು ಹೆಚ್ಚು ಚಾಲ್ತಿಯಲ್ಲಿರೋದು ಗೊಂದಲ ಮೂಡಿಸಿದೆ. ಯಾವುದೇ ಕಾರಣಕ್ಕೂ ಕೆಆರ್ ಎಸ್ ನಲ್ಲಿ ನಾಲ್ವಡಿಯವರ ಪ್ರತಿಮೆ ಬಿಟ್ಟು ಬೇರೆ ಪ್ರತಿಮೆ ಸ್ಥಾಪನೆ ಮಾಡಿದ್ರೆ ಪ್ರತಿಮೆಯನ್ನು ಒಡೆದು ಹಾಕುತ್ತೇವೆ. ನಮ್ಮ ಪ್ರಾಣ ಹೋದರೂ ಪರವಾಗಿಲ್ಲ, ನಾವು ಮಾತ್ರ ನಾಲ್ವಡಿಯವರ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡಲು ಬಿಡಲ್ಲ ಎಂದು ಎಚ್ಚರಿಸಿದರು.

ನಮ್ಮ ಮನೆಗೆ ನಮ್ಮ ಹೆಸರು ಹಾಕಿಕೊಳ್ತೇವೆ, ಮೇಸ್ತ್ರಿ ಅಥವಾ ಗಾರೆ ಕೆಲಸದವರ ಹೆಸರು ಹಾಕ್ತಿವಾ ಎಂದು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ತುಂಬಾ ಜನಕ್ಕೆ ಕೆಆರ್ ಎಸ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದೆ ವಿಶ್ವೇಶ್ವರಯ್ಯರನ್ನೇ ಒಪ್ಪಿಕೊಂಡಿದ್ದರು. ಈಗ ಎಲ್ಲರಿಗೂ ಸತ್ಯ ತಿಳಿದಿದೆ, ವಿಶ್ವೇಶ್ವರಯ್ಯರನ್ನು ದೂರ ತಳ್ಳಿ ನಾಲ್ವಡಿಯವರನ್ನು ಒಪ್ಪಿಕೊಂಡಿದ್ದಾರೆ. ಪ್ರತಿಮೆ ಸ್ಥಾಪನೆ ವಿಚಾರವಾಗಿ ಒಕ್ಕಲಿಗರು,ಲಿಂಗಾಯಿತರು,ಮುಸ್ಲಿಂರ ಸಂಘಗಳು ಹೋರಾಟ ಮಾಡಬೇಕು. ಶೋಷಿತರ ವರ್ಗಕ್ಕೆ ಶಿಕ್ಷಣ ಕೊಡುವುದನ್ನು ತಡೆದ ವ್ಯಕ್ತಿ ವಿಶ್ವೇಶ್ವರಯ್ಯ. ಅಂತವರ ಪ್ರತಿಮೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಿಗೆ ರಾಜಕೀಯ ತೆವಲು ಇರಬೇಕು. ಪ್ರತಿಮೆ ವಿಚಾರಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಬದ್ದ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಯದುವೀರ್ ಕೂಡಾ ಇನ್ನೂ ಬಾಲಕ. ಅವನು ತಾಯಿ ಹೇಳಿದ ಮಾತಿಗೆ ತಲೆ ಅಲ್ಲಾಡಿಸುತ್ತಾನೆ ಎಂದು ರಾಜವಂಶಸ್ಥರನ್ನು ಏಕವಚನದಲ್ಲಿ ಜರಿದರು. ರಾಜವಂಶಸ್ಥರು ಮೊದಲು ತಮ್ಮ ಪೂರ್ವಜರ ಇತಿಹಾಸ ತಿಳಿಯಬೇಕು. ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಬಾರದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: