ಮನರಂಜನೆ

ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ: `777 ಚಾರ್ಲಿ’ ಚಿತ್ರದ ಮೇಕಿಂಗ್​ ವಿಡಿಯೋ ರಿಲೀಸ್

ಬೆಂಗಳೂರು,ಜೂ.6-ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಕ್ಷಿತ್ ಗೆ ಸ್ಯಾಂಡಲ್ ವುಡ್ ತಾರೆಯರು, ಅಭಿಮಾನಿಗಳು ಶುಭಕೋರಿದ್ದಾರೆ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಪುನೀತ್​ ರಾಜಕುಮಾರ್​, ನೆನಪಿರಲಿ ಪ್ರೇಮ್​, ಹೇಮಂತ್​ ರಾವ್​, ಪುಷ್ಕರ್​ ಮಲ್ಲಿಕಾರ್ಜುನಯ್ಯ, ರಿಷಭ್​ ಶೆಟ್ಟಿ, ಅಜನೀಶ್​ ಲೋಕನಾಥ್​ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

 

ಹುಟ್ಟುಹಬ್ಬದ ಪ್ರಯುಕ್ತ ರಕ್ಷಿತ್ ಅಭಿನಯದ 777 ಚಾರ್ಲಿ ಸಿನಿಮಾ ತಂಡದಿಂದ ವಿಶೇಷ ಗಿಫ್ಟ್ ಸಿಕ್ಕಿದೆ. `ಲೈಫ್​ ಆಫ್​ ಧರ್ಮ ಎಂಬ 777 ಚಾರ್ಲಿ’ ಚಿತ್ರದ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಲಾಗಿದೆ. ವಿಡಿಯೋ ಜೊತೆಗೆ ಎರಡು ಪೋಸ್ಟರ್​ಗಳು ಬಿಡುಗಡೆಯಾಗಿರುವುದು ವಿಶೇಷ.

ಈ ವಿಡಿಯೋದಲ್ಲಿ ಚಿತ್ರದ ಮೇಕಿಂಗ್​ ದೃಶ್ಯಗಳನ್ನು ಸೇರಿಸಲಾಗಿದ್ದು, ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿದೆ. ರಕ್ಷಿತ್​ ಸಹ ಈ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ರಕ್ಷಿತ್ ತಮ್ಮ ಹುಟ್ಟೂರಾದ ಉಡುಪಿಗೆ ಹೋಗಿ ಕುಟುಂಬದವರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಕ್ಷಿತ್ ಜನ್ಮದಿನಾಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಜಲ್ಲಿ ವೈರಲ್ ಆಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯಬೇಕಿತ್ತು. ಆದರೆ, ಲಾಕ್​​ಡೌನ್​ನಿಂದಾಗಿ ಚಿತ್ರದ ಕೆಲಸಗಳಿಗೆ ಬ್ರೇಕ್ ಬಿತ್ತು. 777 ಚಾರ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಚಿತ್ರಕ್ಕೆ ಕರಣ್ ರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೈಸೂರು ಹಾಗೂ ಉತ್ತರ ಪ್ರದೇಶದ ಕೆಲವು ಶೂಟಿಂಗ್ ದೃಶ್ಯ ಬಾಕಿಯಿದೆಯಂತೆ. ಪೋಸ್ಟರ್ ಗಳ ಮೂಲಕವೇ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿಯೂ ರಿಲೀಸ್ ಆಗಲಿದೆ. (ಎಂ.ಎನ್)

Leave a Reply

comments

Related Articles

error: