ಕ್ರೀಡೆಮನರಂಜನೆ

ತಾನು ಅಭಿನಯಿಸಿದ ‘ಫ್ರೆಂಡ್ ಶಿಪ್’ ಚಿತ್ರದ ಪೋಸ್ಟರ್  ಹಂಚಿಕೊಂಡ ಕ್ರಿಕೆಟಿಗ ಹರ್ಭಜನ್ ಸಿಂಗ್  

ದೇಶ(ನವದೆಹಲಿ)ಜೂ.6;- ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಾವು ಅಭಿನಯಿಸಿದ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಪೋಸ್ಟರ್‌ನಲ್ಲಿ ದಕ್ಷಿಣ ಸೂಪರ್‌ಸ್ಟಾರ್ ಅರ್ಜುನ್ ಸರ್ಜಾ ಮತ್ತು ಹರ್ಭಜನ್ ಸಿಂಗ್   ಕಾಣಿಸಿಕೊಂಡಿದ್ದಾರೆ. ಇದು ಅವರ ಚೊಚ್ಚಲ ಚಿತ್ರದ ಪೋಸ್ಟರ್. ಈ ತಮಿಳು ಚಿತ್ರದ ಹೆಸರು ‘ಸ್ನೇಹ’. ಹರ್ಭಜನ್ ಅಭಿನಯದ ಮೊದಲ ಚಿತ್ರವನ್ನು ಜಾನ್ ಪಾಲ್ ರಾಜ್ ಮತ್ತು ಶಾಮ್ ಸೂರ್ಯ ನಿರ್ದೇಶಿಸಿದ್ದಾರೆ. ಆಫ್ ಸ್ಪಿನ್ನರ್ ಆಗಿದ್ದ ಹರ್ಭಜನ್ ಕೂಡ ಕೆಲವು ಕ್ರಿಕೆಟಿಗರು ಚಿತ್ರಗಳಲ್ಲಿ ಕೆಲಸ ಮಾಡಿರುವ ಕುರಿತಾದ ಪಟ್ಟಿಗೆ ಸೇರಿಕೊಂಡಿದ್ದಾರೆ.

ಹರ್ಭಜನ್ ಸಿಂಗ್ ಅಭಿನಯದ ಚೊಚ್ಚಲ ಚಿತ್ರ ‘ಸ್ನೇಹ’ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಹಂಚಿಕೊಂಡ ಭಜ್ಜಿ, ‘ಫ್ರೆಂಡ್ಶಿಪ್ ಮೂವಿ’ ಎಂದು ಬರೆದಿದ್ದಾರೆ.  ಚಿತ್ರದ ಪೋಸ್ಟರ್‌ನಲ್ಲಿ ಭಜ್ಜಿ ಏನನ್ನೋ ಯೋಚಿಸುತ್ತಿರುವಂತಿದೆ. ಅದೇ ವೇಳೆ   ಅರ್ಜುನ್ ಸರ್ಜಾ ಆಕ್ರಮಣಕಾರಿ ನೋಟ  ಬೀರಿದ್ದಾರೆ.

ಭಜ್ಜಿ 2016 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಟಿ 20 ಇಂಟರ್ ನ್ಯಾಷನಲ್ ಆಡಿದ್ದರು.  ಅವರು ಕಳೆದ 4 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್‌ಗಾಗಿ ಯಾವುದೇ ಸರಣಿ ಮತ್ತು ಪಂದ್ಯಗಳಲ್ಲಿ ಆಡಿಲ್ಲ, ಅವರು ಟೆಸ್ಟ್ ಅಥವಾ ಒಂದು ದಿನ ಅಥವಾ ಟಿ 20 ಆಡಲಿಲ್ಲ. ಆದರೆ ಈ ಅವಧಿಯಲ್ಲಿ ಅವರು ಸತತವಾಗಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್‌ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಆದರೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಬಾರಿ ಐಪಿಎಲ್ ಮುಂದೂಡಲ್ಪಟ್ಟಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: