ಪ್ರಮುಖ ಸುದ್ದಿಮನರಂಜನೆ

ಕೊರೋನಾ ವೈರಸ್ ಗೆ  ಬಾಲಿವುಡ್  ನಿರ್ಮಾಪಕ ಅನಿಲ್ ಸೂರಿ  ಬಲಿ

ದೇಶ(ಮುಂಬೈ)ಜೂ.8:- ಇತ್ತೀಚೆಗೆ ಬಾಲಿವುಡ್ ನ ಖ್ಯಾತ ಸಂಗೀತ ಸಂಯೋಜಕ ವಾಜಿದ್ ಖಾನ್ ಅವರ ನಿಧನದ ನಂತರ ಬಾಲಿವುಡ್‌ನ ಮತ್ತೋರ್ವ  ಚಲನಚಿತ್ರ ನಿರ್ಮಾಪಕ ಅನಿಲ್ ಸೂರಿ  ನಿಧನರಾಗಿದ್ದಾರೆ.

1978 ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್, ರೇಖಾ, ಜೀತೇಂದ್ರ, ಮಾಲಾ ಸಿನ್ಹಾ ಮತ್ತು  1984 ರಲ್ಲಿ ಧರ್ಮೇಂದ್ರ, ರಾಜ್ ಕುಮಾರ್, ಹೇಮಾ ಮಾಲಿನಿ, ಸುನಿಲ್ ದತ್, ಕಮಲ್ ಹಾಸನ್ ಮುಖ್ಯ ಪಾತ್ರಗಳಲ್ಲಿ ‘ರಾಜ್ ತಿಲಕ್ ‘ಚಿತ್ರವನ್ನು ನಿರ್ಮಿಸಿದ ನಿರ್ಮಾಪಕ ಅನಿಲ್ ಸೂರಿ ಮುಂಬೈನಲ್ಲಿ ನಿಧನರಾದರು.

ಅವರಿಗೆ 77 ವರ್ಷ ವಯಸ್ಸಾಗಿತ್ತು.  ಅನಿಲ್ ಸೂರಿಯ ಸಹೋದರ ರಾಜೀವ್ ಸೂರಿಯನ್ನು ಮಾಧ್ಯಮ ಸಂಪರ್ಕಿಸಿದ್ದು  ಜೂನ್ 2 ರಂದು ತೀವ್ರ ಜ್ವರ ಬಂದ ನಂತರ ಮರುದಿನ ಅವರ ಆರೋಗ್ಯವು ಹದಗೆಟ್ಟಿತ್ತು ಎಂದು ಹೇಳಿದರು. ಈ ಸ್ಥಿತಿಯಲ್ಲಿ ಅನಿಲ್ ಅವರನ್ನು ಲೀಲಾವತಿ ಮತ್ತು ಹಿಂದೂಜಾ ಆಸ್ಪತ್ರೆಗೆ ಕರೆದೊಯ್ಯುವಾಗ  ಎರಡೂ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ  ಉಲ್ಲೇಖಿಸಿ ಅವರನ್ನು ದಾಖಲಿಸಲು ನಿರಾಕರಿಸಿದರು ಎಂದು ರಾಜೀವ್ ಹೇಳಿದ್ದಾರೆ.

ಅನಿಲ್ ಸೂರಿ  ನಿಧನಕ್ಕೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: