
ಮೈಸೂರು
ಸೋಮವಾರದಿಂದ ಭಕ್ತರಿಗೆ ಚರ್ಚ್, ಮಸೀದಿ ಪ್ರವೇಶಕ್ಕೂ ಅನುಮತಿ ನೀಡಿದ ಸರ್ಕಾರ : ಸಿದ್ಧತೆ
ಮೈಸೂರು,ಜೂ.6-ಇದೇ ಸೋಮವಾರದಿಂದ (ಜೂ.8) ದೇವಾಲಯ, ಚರ್ಚ್, ಮಸೀದಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ನಗರದ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಸ್ವಚ್ಛತಾ ಕಾರ್ಯವನ್ನು ಕೈಗೊಂಡಿರುವುದರ ಜೊತೆಗೆ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಮಾರ್ಕ್ ಗಳನ್ನು ಮಾಡಲಾಗುತ್ತಿದೆ.
ಚಾಮುಂಡಿಬೆಟ್ಟ, ಸಂತ ಫಿಲೋಮಿನಾ ಚರ್ಚ್, ಉದಯಗಿರಿಯಲ್ಲಿರುವ ಖುಬಾ ಮಸೀದಿಯಲ್ಲಿ ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇವರ ದರ್ಶನ ವೇಳೆ, ಪ್ರಾರ್ಥನೆ ವೇಳೆ, ನಮಾಜ್ ವೇಳೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಜೊತೆಗೆ ಎಲ್ಲರೂ ಮಾಸ್ಕ್ ಧರಿಸಿ ಒಳಪ್ರವೇಶಿಸುವಂತೆ ಸೂಚನೆ ನೀಡಲಾಗಿದ್ದು, ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಿದ್ದಾರೆ. (ಎಂ.ಎನ್)