ಮೈಸೂರು

ಪಾಲಿಕೆ ವಲಯ ಕಛೇರಿ ಒಂದರಲ್ಲಿ ಕೊರೋನಾ ಕೋವಿಡ್-19 ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ಮೈಸೂರು,ಜೂ.8:- ಮೈಸೂರು ಮಹಾನಗರ ಪಾಲಿಕೆ ವಲಯ ಕಛೇರಿ ಒಂದರಲ್ಲಿ ಕೊರೋನಾ ಕೋವಿಡ್-19 ಸಂದರ್ಭದಲ್ಲಿ ಕಛೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ  ಆರ್ ಟಿ ಐ ಕಾರ್ಯಕರ್ತ ಎಂ.ಸಿ.ಆನಂದ್ ಎಂಬವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಕೋವಿಡ್-19 ವೈರಸ್ ನಿಂದಾಗಿ ಅನೇಕ ಸಾವು ನೋವುಗಳು ಸಂಭವಿಸಿವೆ. ಆದರೆ ಮೈಸೂರು ಮಹಾನಗರ ಪಾಲಿಕೆ ವಲಯ ಕಛೇರಿ -1ರಲ್ಲಿ ವಲಯ ಆಯುಕ್ತರಾದ ಐಶ್ವರ್ಯಾ ಅವರ ಅಧ್ಯಕ್ಷತೆಯಲ್ಲಿ 7/5/2020ರಂದು ರಕ್ಷಿತ್, ಬಿಲ್ ಕಲೆಕ್ಟರ್ ಇವರ ಹುಟ್ಟುಹಬ್ಬವನ್ನು ಸಹಾಯಕ ಕಂದಾಯ ಅಧಿಕಾರಿ ಸುರೇಶ್ ಕುಮಾರ್, ಭರತ್(ಅಭಿವೃದ್ಧಿ ಅಧಿಕಾರಿ) ಪಿ.ಬಾಬು (ಸಹಾಯಕ ಕಂದಾಯ ಅಧಿಕಾರಿ), ನಾಗೇಶ್ ಗೌಡ(ಬಿಲ್ ಕಲೆಕ್ಟರ್) ಸಂತೋಷ್(ಕಿರಿಯ ಅಭಿಯಂತರರು) ಇವರುಗಳು ಸಾರ್ವಜನಿಕ ಕಛೇರಿಯನ್ನು ದುರ್ಬಳಕೆ ಮಾಡಿಕೊಂಡು ನೌಕರರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿರುತ್ತಾರೆ. ಸಿಬ್ಬಂದಿ ನೌಕರರ ವಿರುದ್ಧ Disaster Management act-2005 ರಡಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕೊರೋನಾ ಕೋವಿಡ್-19 ವೈರಸ್ ಕೆಲಸದಲ್ಲಿ ನಿರ್ಲಕ್ಷ್ಯ ತೋರಿರುವ ನೌಕರರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: