ಮೈಸೂರು

ಜಿ.ಎಸ್.ಟಿ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ : ಮಾ.25 ರಂದು

ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ವಿಭಾಗ ಹಾಗೂ ಮೈಸೂರು ವಿವಿಯ ವಾಣಿಜ್ಯ ಮತ್ತು ವ್ಯವಹಾರ ಅಧ್ಯಾಪಕರ ಒಕ್ಕೂಟ ಇವರ ಸಹಯೋಗದಲ್ಲಿ ಜಿ.ಎಸ್.ಟಿ ಯ ಸ್ವರೂಪ, ಕಾರ್ಯವೈಖರಿ ಮತ್ತು ಅದರ ಪ್ರಭಾವವನ್ನು ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಮಾ. 25 ರಂದು ಬೆಳಿಗ್ಗೆ 10 ಗಂಟೆಗೆ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಶೈಕ್ಷಣಿಕ ಮುಖ್ಯಸ್ಥ ಮಲ್ಲಿಕಾರ್ಜುನ ಶೆಟ್ಟಿ ಹೇಳಿದರು.

ಮೈಸೂರಿನ ಪತ್ರಕರ್ತರ  ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ರೆಕ್ಟರ್ ಸಂತ ಫಿಲೋಮಿನಾ ಕಾಲೇಜಿನ ಗುರು ಲೆಸ್ಲಿ ಮರೋಸ್, ಎಂ.ಡಿ.ಇ.ಎಸ್ ನ  ಕಾರ್ಯದರ್ಶಿ ವಿಜಯಕುಮಾರ್, ಆಟೊಮೊಟಿವ್ ಆ್ಯಕ್ಸಲ್ ಲಿಮಿಟೆಡ್ ನ ಅಧ‍್ಯಕ್ಷ ಮುತ್ತು ಕುಮಾರ್, ವಾಣಿಜ್ಯ ತೆರಿಗೆ ವಿಭಾಗದ ಸಹಾಯಕ ಆಯುಕ್ತ ಕುಮಾರ್  ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ.ಸಿ.ಮಣಿ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ‍್ಯಾಪಕ ಪ್ರೊ.ಯಶ್ವಂತ್ ಡೋಂಗ್ರೆ, ಆರ್.ಕೆ.ರಸ್ತೋಗಿ, ತೆರಿಗೆ ಸಲಹೆಗಾರ ಕೆ.ಆರ್.ಸತೀಶ, ಲೆಕ್ಕ ಪರಿಶೋಧಕ ಅನ್ಸುಮಾನ್, ಶಾಂತ ಮಲ್ಲೇಶ್, ಮಹೇಶ್ ಹೆಗ್ಡೆ, ನಿತಿನ್ ಮಹದೇವಪ್ಪ ಇನ್ನಿತರರು ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಂ.ಮಣಿ, ಸೌಮ್ಯ ಹೆಚ್.ಎಲ್, ನಾಗಾರ್ಜುನ್ ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: