ಮೈಸೂರು

ಕೆ.ಆರ್.ನಗರ ಓವರ್ ಸೀಸ್ ಬ್ಯಾಂಕ್ ವ್ಯವಸ್ಥಾಪಕರಿಗೆ ಕೊರೋನಾ ಹಿನ್ನೆಲೆ : ಬ್ಯಾಂಕ್ ಸೀಲ್ ಡೌನ್

ಮೈಸೂರು,ಜೂ.6:- ಕೆ.ಆರ್.ನಗರದಿಂದ ತಮಿಳುನಾಡಿಗೆ ತೆರಳಿದ ಬ್ಯಾಂಕ್  ವ್ಯವಸ್ಥಾಪಕರೋರ್ವರಿಗೆ  ಕೊರೋನಾ ಸೋಂಕು ದೃಢ ಪಟ್ಟ  ಹಿನ್ನಲೆಯಲ್ಲಿ  ತಾಲೂಕಿನಲ್ಲಿ ಆತಂಕ ಹೆಚ್ಚಾಗಿದೆ. ಬ್ಯಾಂಕ್ ನ ಐವರು ಸಹದ್ಯೋಗಿಗಳನ್ನು  ಕ್ವಾರೆಂಟೈನ್ ಮಾಡಲಾಗಿದ್ದು ಸದ್ಯ  ಬ್ಯಾಂಕ್ ಸೀಲ್ ಡೌನ್ ಮಾಡಲಾಗಿದೆ.

ಕೆ.ಆರ್‌.ನಗರ ಪಟ್ಟಣದ ಇಂಡಿಯನ್ ಓವರ್ ಸೀಸ್  ಬ್ಯಾಂಕ್ ಸೀಲ್‌ಡೌನ್ ಆಗಿದೆ.  ಇಂಡಿಯನ್ ಓವರ್ ಸೀಸ್  ಬ್ಯಾಂಕ್ ಮ್ಯಾನೇಜರ್‌ಗೆ ಕೊರೋನಾ ಬಂದ ಹಿನ್ನೆಲೆಯಲ್ಲಿ  ಸೀಲ್‌ಡೌನ್ ಮಾಡಲಾಗಿದೆ. ಬ್ಯಾಂಕ್  ವ್ಯವಸ್ಥಾಪಕರು ತಮಿಳುನಾಡಿಗೆ ತೆರಳಿದಾಗ ಮಧುರೈ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿತ್ತು. ವರದಿ ಬಂದಾಗ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಅವರು ಮೈಸೂರು ಜಿಲ್ಲಾಧಿಕಾರಿಯವರಿಗೆ ಮಾಹಿತಿ ರವಾನಿಸಿದ್ದರು.

ಕೊರೋನಾ ದೃಢ ಹಿನ್ನೆಲೆ ಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಬ್ಯಾಂಕ್ ಸೀಲ್‌ಡೌನ್ ಮಾಡಿದ್ದಾರೆ. ಜೂನ್ 4ರಂದು ಕೆ.ಆರ್.ನಗರದಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ವ್ಯವಸ್ಥಾಪಕರು ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಸ್ನೇಹಿತನ ಜೊತೆ ಬೈಕ್ ನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮಧುರೈ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಸದ್ಯ  ಕನ್ಯಾಕುಮಾರಿಯ ನಾಗರ ಕೊಯಿಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ   ಚಿಕಿತ್ಸೆ ಪಡೆಯುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: