ಮೈಸೂರು

ಎಲೆ ತೋಟ ಸರ್ಕಲ್ ಬಳಿ ಬುಡಸಮೇತ ಉರುಳಿ ಬಿದ್ದ ವಿದ್ಯುತ್ ಕಂಬ

ಮೈಸೂರು,ಜೂ.7:- ಮೈಸೂರು ನಿನ್ನೆ ಬಿದ್ದ ಭಾರೀ  ಮಳೆಗೆ ಮೈಸೂರಿನ ಜೆ.ಎಲ್.ಬಿ.ರಸ್ತೆಯ ಎಲೆ ತೋಟ ಸರ್ಕಲ್ ಬಳಿ ವಿದ್ಯುತ್ ಕಂಬಗಳು ಬುಡಸಮೇತ ಉರುಳಿ ಬಿದ್ದಿದೆ.

ರೆಸ್ಟೋರೆಂಟ್ ಒಂದರ ಮೇಲೆ ಉರುಳಿ ಬಿದ್ದಿದ್ದು, ಘಟನೆ ನಡೆದ ಮರುಕ್ಷಣವೇ ವಿದ್ಯುತ್ ಸಂಪರ್ಕ  ಕಡಿತಗೊಂಡಿತ್ತು. ಇದರಿಂದ ಭಾರೀ  ಅನಾಹುತ ತಪ್ಪಿದಂತಾಗಿದೆ. ಕಂಬಕ್ಕೆ ಅಳವಡಿಸಲಾದ ವಿದ್ಯುತ್ ತಂತಿ ಹಾಗೂ ಕೇಬಲ್ ವೈರ್ ಗಳು ಜೋತು ಬಿದ್ದಿವೆ. ಇಂದು  ಚಾಮುಂಡೇಶ್ವರಿ  ವಿದ್ಯುತ್  ಸರಬರಾಜು ನಿಗಮದವರು  ಆಗಮಿಸಿ ದುರಸ್ಥಿ ಕಾರ್ಯ ನಡೆಸಿದ್ದಾರೆ. (ಕೆ.ಎಸ್,ಎಸ್,ಎಚ್)

Leave a Reply

comments

Related Articles

error: