ಮೈಸೂರು

ಭಕ್ತರಿಗೆ ನಾಳೆಯಿಂದ ಶ್ರೀಕಂಠೇಶ್ವರ ದರ್ಶನಭಾಗ್ಯ : ತೀರ್ಥ ಪ್ರಸಾದ, ದಾಸೋಹ, ಹಣ್ಣು ಕಾಯಿ ಪೂಜೆ ಇಲ್ಲ :  ದರ್ಶನ ಮಾತ್ರ

ಮೈಸೂರು, ಜೂ.7:-    ಲಾಕ್ ಡೌನ್ ನಿಂದಾಗಿ ಕಳೆದ ಎರಡು ತಿಂಗಳಿನಿಂದ ಬಂದ್ ಆಗಿದ್ದ  ದಕ್ಷಿಣ ಕಾಶಿ ನಂಜನಗೂಡಿನ  ಶ್ರೀಕಂಠೇಶ್ವರ ದೇವಾಲಯದಲ್ಲಿ ನಾಳೆಯಿಂದ ಭಕ್ತರಿಗೆ ದರ್ಶನ ಭಾಗ್ಯ  ಲಭಿಸಲಿದೆ. ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ದೇವಸ್ಥಾನ ಮಂಡಳಿಯ ಅಧ್ಯಕ್ಷ ಇಂದನ್ ಬಾಬು ತಿಳಿಸಿದರು.

ಕೊರೋನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ದೇವಸ್ಥಾನಗಳು ಬಂದ್ ಆಗಿದ್ದವು. ಆದರೆ ಸರ್ಕಾರದ ಸೂಚನೆಯಂತೆ ಹಲವು ಹೊಸ ರೂಲ್ಸ್ ಪಾಲಿಸಿ ಭಕ್ತರಿಗೆ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.  ಭಕ್ತರ ದರ್ಶನಕ್ಕೆ ಬೇಕಾದ ಮುಜರಾಯಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.  ಜೊತೆಗೆ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರ ದೇವಸ್ಥಾನ ತೆಗೆಯಲು ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ ಮೂರುದಿನಗಳಿಂದ ಸಿದ್ಧತೆ ಮಾಡಿಕೊಂಡಿದೆ.

ಭಕ್ತರು ಹೊಸ ರೂಲ್ಸ್ ಗಳನ್ನು ಪಾಲಿಸಲೇಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ದೇವಸ್ಥಾನದ ಮುಂಭಾಗ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೈಕಾಲು ತೊಳೆದುಕೊಂಡು ಹೋಗಬೇಕು. ಜೊತೆಗೆ ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳಬೇಕು ಹಾಗೂ ಆಡಳಿತ ಮಂಡಳಿಯಿಂದ ಬಣ್ಣದಿಂದ ಹೊರಗಡೆ ಒಳಗಡೆ ಬಾಕ್ಸ್ ಹಾಕಲಾಗಿದೆ.  ಬಾಕ್ಸ್ ಒಳಗಡೆ ನಿಂತು ಪ್ರತಿಯೊಬ್ಬ ಭಕ್ತಾದಿಗಳು ಹೋಗಬೇಕು.  ಜೊತೆಗೆ ದೇವಾಲಯ ಒಳಗಡೆ ಹಗ್ಗವನ್ನು ಕಟ್ಟಲಾಗಿದೆ. ಅದರ ಒಳಗಡೆ ಬರಬೇಕು. ಇದಲ್ಲದೆ ದೇವಸ್ಥಾನದ ನೌಕರರು ಕೂಡ ಮಾಸ್ಕ್ ಧರಿಸಬೇಕು. ಯಾರೂ  ಕೂಡ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಬಾರದು.  ಬರುವ ಭಕ್ತಾದಿಗಳು ಚಪ್ಪಲಿಗಳನ್ನು ಹಾಕಿಕೊಂಡು ಬರಬಾರದು.  ಬಂದಿದ್ದರೆ ತಮ್ಮ ವಾಹನದಲ್ಲಿ ಬಿಡಬೇಕು.  ಇಲ್ಲ ನಿಗದಿತ ಸ್ಥಳದಲ್ಲೇ ಬಿಡಬೇಕು.  ಭಕ್ತರಿಗೆ ದಾಸೋಹ  ಇರುವುದಿಲ್ಲ ಮುಂದಿನ ಆದೇಶ ಬರುವವರೆಗೂ ದೇವಸ್ಥಾನದ ಒಳಗಡೆ ದರ್ಶನಕ್ಕೆ ಮಾತ್ರ ಅವಕಾಶ.  ಸೇವೆಗಳಿಗೆ ಅವಕಾಶವಿರುವುದಿಲ್ಲ . ಭಕ್ತಾದಿಗಳು ಹೂವು ಹಣ್ಣು ಕಾಯಿ ಮುಂತಾದ ಪೂಜಾಸಾಮಗ್ರಿಗಳನ್ನು ತರಲು ಅವಕಾಶವಿರುವುದಿಲ್ಲ . ಪ್ರಸಾದ ಹಾಗೂ ತೀರ್ಥ ನೀಡಲು ಅವಕಾಶವಿರುವುದಿಲ್ಲ.  65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಹತ್ತು ವರ್ಷ ಕೆಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪ್ರವೇಶ ಇರುವುದಿಲ್ಲ.  ದೇವಾಲಯದ ವಸತಿಗೃಹದಲ್ಲಿ ತಂಗಲು ಅವಕಾಶವಿರುವುದಿಲ್ಲ. ವಿಗ್ರಹಗಳು ಹಾಗೂ ಪವಿತ್ರ ಗ್ರಂಥಗಳನ್ನು ಮುಟ್ಟುವುದನ್ನು  ನಿಷೇಧಿಸಲಾಗಿದೆ.  ಈ ರೀತಿ ಅನೇಕ ಹೊಸ ರೂಲ್ಸ್ ಗಳನ್ನು ಅಳವಡಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ  ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: