ಕರ್ನಾಟಕಪ್ರಮುಖ ಸುದ್ದಿ

ಬಳ್ಳಾರಿ ಪಾಲಿಕೆ ಕಾಂಗ್ರೆಸ್ ಗುಂಪುಗಳ ನಡುವೆ ವೈಷಮ್ಯ: ಬೈಕ್‍ಗಳಿಗೆ ಬೆಂಕಿ

ಬಳ್ಳಾರಿ: ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೂ ಮುನ್ನವೇ ಆಡಳಿತಾರೂಢ ಕಾಂಗ್ರೆಸ್‌ನ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು ಬಳ್ಳಾರಿಯಲ್ಲಿ ಮತ್ತೆ ಸೇಡು, ದ್ವೇಷದ ರಾಜಕಾರಣ ತಲೆದೋರಿದೆ.

ದಿವಾಕರ ಬಾಬು ಬೆಂಬಲದಿಂದ ಗೆದ್ದು ಇದೀಗ ನಿಷ್ಠೆ ಬದಲಿಸಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಬಳ್ಳಾರಿಯ ವಾರ್ಡ್‍ ನಂಬರ್‍ 27ರ ಸದಸ್ಯೆ ದಿವ್ಯಕುಮಾರಿಯವರ ಮನೆ ಮುಂದಿನ ಎರಡು ಬೈಕ್ ಗಳಿಗೆ ವಿರೋಧಿ ಬಣದ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ.

ಬಳ್ಳಾರಿಯ ಕೌಲ್‍ಬಜಾರ್‍ ಪ್ರದೇಶದಲ್ಲಿರುವ ದಿವ್ಯಕುಮಾರಿಯವರ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್‍ಗಳಿಗೆ ದಿವಾಕರ ಬಾಬು ಬೆಂಬಲ ಹೊಂದಿರುವ ಗಾಜಲು ಶೀನು ಬಣದ ಬೆಂಬಲಿಗರು ಬೆಂಕಿ ಹಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಮಾಜಿ ಸಚಿವ ದಿವಾಕರ ಬಾಬು ಹಾಗೂ ಹಾಲಿ ಸಚಿವ ಸಂತೋಷ ಲಾಡ್ ಬಣದ ಸದಸ್ಯರ ಮಧ್ಯೆಯೇ ಕಿತ್ತಾಟ ಘರ್ಷಣೆ ಆರಂಭವಾಗುವ ಮೂಲಕ ಬಳ್ಳಾರಿ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ದೃಡಪಟ್ಟಿದೆ.

ಬೈಕ್ ಗಳಿಗೆ ಬೆಂಕಿ ಹಚ್ಚಿದ ವೇಳೆ ಪಾಲಿಕೆ ಸದಸ್ಯೆ ದಿವ್ಯಕುಮಾರಿ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಇದೀಗ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

(ಎಸ್‍.ಎನ್‍/ಎನ್‍.ಬಿ.ಎನ್‍)

 

Leave a Reply

comments

Related Articles

error: