ದೇಶಪ್ರಮುಖ ಸುದ್ದಿ

ಎರಡೂ ಬಣಕ್ಕೂ ದಕ್ಕಲಿಲ್ಲ ಎರಡೆಲೆ ಚಿನ್ಹೆ

ಚೆನ್ನೈ/ನವದೆಹಲಿ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಡುವೆ ನಡೆಯುತ್ತಿರುವ ಅಗ್ಗ ಜಗ್ಗಾಟಕ್ಕೆ ಚುನವಾಣೆ ಆಯೋಗ ತಾಲ್ಕಾಲಿಕ ವಿರಾಮ ನೀಡಿದೆ. ಪಕ್ಷದ ಅಧಿಕೃತ ಚಿನ್ಹೆಯಾದ ಎರಡೆಲೆ ಗುರುತನ್ನು ಯಾರಿಗೂ ನೀಡದೆ ಕಾಯ್ದಿರಿಸಿದೆ.

ಜಯಲಲಿತಾ ಅವರ ನಿಧನದಿಂದಾಗಿ ತೆರವಾಗಿದ್ದ ಕೆ. ಆರ್ ನಗರ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನವಾಣೆಯಲ್ಲಿ ಸ್ಪರ್ಧಿಸಲು ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬವನ್ನು ಚಿಹ್ನೆಯಾಗಿ ನೀಡಲಾಗಿದೆ. ಶಶಿಕಲಾ ಬಣಕ್ಕೆ ಆಟೋ ರಿಕ್ಷಾ ಚಿಹ್ನೆಯನ್ನು ಚುನಾವಣೆ ಆಯೋಗ ನೀಡಿದೆ.

ಪಕ್ಷದ ಹೆಸರು ಹಾಗೂ ಚಿಹ್ನೆಗಾಗಿ ಪನ್ನೀರ್ ಸೆಲ್ವಂ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಈ ಹಿನ್ನಲೆಯಲ್ಲಿ ಆಯೋಗವು, ಎಐಎಡಿಎಂಕೆ ಹೆಸರು ಹಾಗೂ ಎರಡು ಎರಡೆಲೆಗಳಿರುವ ಚಿಹ್ನೆಯ ಬಳಕೆಯ ಮೇಲೆ ಮಾರ್ಚ್ 22ರ ಮಧ್ಯರಾತ್ರಿ ತಾತ್ಕಾಲಿಕ ತಡೆ ಹೇರಿತ್ತು. ಚಿಹ್ನೆ ತಮಗೇ ಸೇರಬೇಕು ಎಂದು ಶಶಿಕಲಾ ಬಣ ವಾದಿಸಿತ್ತು. ಇದೀಗ ಚಿನ್ಹೆಯನ್ನು ಯಾರಿಗೂ ನೀಡದೆ ತಟಸ್ಥವಾಗಿರಿಸಿದ್ದು, ಎರಡೂ ಬಣಕ್ಕೂ ಬೇರೆ ಬೇರೆ ಚಿನ್ಹೆ ನೀಡಿದೆ. ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 12ರಂದು ನಡೆಯಲಿದೆ.

(ಎಸ್‍.ಎನ್‍/ಎನ್‍.ಬಿ.ಎನ್)

Leave a Reply

comments

Related Articles

error: