ಮೈಸೂರು

ವಿ.ಶ್ರೀನಿವಾಸ್ ಪ್ರಸಾದ್ ಪರ ಮತ ಯಾಚಿಸಿದ ಎಸ್.ಎ.ರಾಮದಾಸ್ : ಗೆಲುವಿನ ವಿಶ್ವಾಸ

ನಂಜನಗೂಡಿನ ವಾರ್ಡ್ ನಂ 18 ರ ನೀಲಕಂಠ ನಗರ ಹಾಗೂ ಆಜಾದ್  ನಗರದಲ್ಲಿ ಭಾರತೀಯ ಜನತಾ ಪಾರ್ಟಿ  ಯುವ ಮೋರ್ಚಾದ ತಂಡದೊಂದಿಗೆ ಪಾದಯಾತ್ರೆ ಮೂಲಕ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಪರ ಮತ ಯಾಚಿಸಲಾಯಿತು.

ಬಹುತೇಕ ಅಸಂಘಟಿತ ವಲಯದ ವಾಹನ  ಚಾಲಕರು , ಗಾರೆ ಕೆಲಸ, ಪೈಂಟರ್, ಕಾರ್ಪೆಂಟರ್, ಎಲೆಕ್ಟ್ರೀಶಿಯನ್, ಪ್ಲಮ್ಬಿಂಗ್, ಹಾಗೂ ಬೀದಿ ವ್ಯಾಪಾರಿಗಳೇ ಹೆಚ್ಚಾಗಿರುವ ನೀಲಕಂಠ ನಗರ ಹಾಗೂ ಆಜಾದ್  ನಗರದಲ್ಲಿ ಇಂದಿಗೂ ಸಹ ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾಣಗೊಂಡಿಲ್ಲ.  ಇಲ್ಲಿನ ಮನೆ ಮನೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಇದರಿಂದಾಗುವ ಅನುಕೂಲಗಳ ಕುರಿತು ಮಾಹಿತಿ ನೀಡಿ ಅರಿವು ಮೂಡಿಸಲಾಯಿತು. ಬಹಳ ವರ್ಷಗಳಿಂದ ಕಣ್ಣಿನ ತೊಂದರಿಂದ ಬಳಲುತ್ತಿರುವವರಿಗೆ ಸರ್ಕಾರದ ಯೋಜನೆಯಡಿಯಲ್ಲಿ  ಚಿಕಿತ್ಸೆಗೆ  ಅನುಕೂಲವಾಗುವ ಮಾಹಿತಿ ತಿಳಿಸಲಾಯಿತು. ನಂಜನಗೂಡಿನ ಸೇವಾ  ಮನೋಭಾವನೆಯುಳ್ಳಂತಹ ಯುವ ಮೋರ್ಚಾದ ಕಾರ್ಯಕರ್ತರಿಗೆ ಚುನಾವಣೆ ಮುಗಿದ ಮೇಲೆ ಅವಶ್ಯವಾಗಿರುವ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸಲು ತಿಳಿಸಲಾಯಿತು. ಈ ಸಂದರ್ಭ ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ ನಂಜನಗೂಡಿನ  ಉಪಚುನಾವಣೆಯಲ್ಲಿ ಜಾತಿ, ಧರ್ಮಗಳನ್ನೂ ಮೀರಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲ ವ್ಯಕ್ತ ಪಡಿಸುತ್ತಿರುವುದು ಬಹಳ ಸಂತಸವಾಗಿದೆ ಹಾಗೂ ಈ ಚುನಾವಣೆಯಲ್ಲಿ ಹಿಂದಿಗಿಂತಲೂ ಬಹಳ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಅಭೂತಪೂರ್ವ ವಿಜಯವನ್ನು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂಜನಗೂಡಿನ ಟೌನ್ ಬಿಜೆಪಿ ಅಧ್ಯಕ್ಷ ವಿನಯ್ ಕುಮಾರ್, ಕಾರ್ಪೊರೇಟರ್ ದೊರೆಸ್ವಾಮಿ, ರಂಗಸ್ವಾಮಿ  ಯುವಮೋರ್ಚಾದ ಸಂಜಯ್ ಶರ್ಮ, ಮರಿಸ್ವಾಮಿ ಅನಂತನಾಗ್, ಭಾಗ್ಯರಾಜ್ ಶ್ರೀಕಂಠ ಕೃಷ್ಣರಾಜ ಕ್ಷೇತ್ರದ ಪ್ರಧಾನಕಾರ್ಯದರ್ಶಿ ಕೃಷ್ಣ(ಕಿಟ್ಟಿ) ಸೇರಿದಂತೆ  ಯುವ ಮೋರ್ಚಾ ಕಾರ್ಯಕರ್ತರು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: