ಕ್ರೀಡೆಪ್ರಮುಖ ಸುದ್ದಿ

ಮೈಕೆಲ್ ಕ್ಲಾರ್ಕ್ ಗೆ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಪ್ರಶಸ್ತಿ  : ಜೂನ್‌ನಲ್ಲಿ ಏಪ್ರಿಲ್ ಫೂಲ್ ಮಾಡಲಾಗುತ್ತಿದೆ ಎಂದು ಭಾವಿಸಿದೆ ಎಂದ ಮೈಕೆಲ್

ದೇಶ(ನವದೆಹಲಿ)ಜೂ.8:-  2015 ರಲ್ಲಿ ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮೈಕೆಲ್ ಕ್ಲಾರ್ಕ್ ಅವರಿಗೆ ಸೋಮವಾರ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಪ್ರಶಸ್ತಿ ನೀಡಲಾಯಿತು.

ಇದರೊಂದಿಗೆ  ಮಾಜಿ ನಾಯಕ ಅಲನ್ ಬಾರ್ಡರ್ ಮತ್ತು ಸ್ಟೀವ್ ವಾ ಅವರೊಂದಿಗೆ ಕ್ಲಾರ್ಕ್ ಈ ಗೌರವವನ್ನು ಪಡೆದ ಆಟಗಾರರ ಪಟ್ಟಿಗೆ ಸೇರಿದರು.   ಕ್ಲಾರ್ಕ್ ಅವರನ್ನು ‘ಆರ್ಡರ್ ಆಫ್ ಆಸ್ಟ್ರೇಲಿಯಾ’ದ ಜನರಲ್ ವಿಭಾಗದಲ್ಲಿ ಅಧಿಕಾರಿಯಾಗಿ ನೇಮಿಸಲಾಗಿದೆ. ಇದು ಒಂದು ನಿರ್ದಿಷ್ಟ ಸಾಧನೆ ಅಥವಾ ಸೇವೆಗಾಗಿ ನೀಡಲಾಗುವ ಗೌರವವಾಗಿದೆ. ಆಸ್ಟ್ರೇಲಿಯಾದಲ್ಲಿ ಆಟಗಾರನಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಕ್ಲಾರ್ಕ್‌ಗೆ ಈ ಗೌರವ ನೀಡಲಾಗಿದೆ.

ಈ ಗೌರವವನ್ನು ಪಡೆದ ನಂತರ, ಕ್ಲಾರ್ಕ್, “ನಿಜ ಹೇಳಬೇಕೆಂದರೆ, ಜೂನ್‌ನಲ್ಲಿ ಯಾರಾದರೂ ನನ್ನನ್ನು ಏಪ್ರಿಲ್ ಫೂಲ್ ಮಾಡುತ್ತಿದ್ದಾರೆಂದು ನಾನು ಭಾವಿಸಿದೆ. ನನಗೆ ತುಂಬಾ ಆಶ್ಚರ್ಯವಾಗಿದೆ, ಆದರೆ ತುಂಬಾ ಗೌರವವನ್ನು ಅನುಭವಿಸುತ್ತಿದ್ದೇನೆ.

‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಗೌರವವನ್ನು ಪಡೆದ ನಂತರ, ಕ್ಲಾರ್ಕ್  ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ  “ಅದನ್ನು ಹೇಗೆ ಹೇಳಬೇಕೆಂದು ನನಗೆ ಅರ್ಥವಾಗುತ್ತಿಲ್ಲ.” ನಾನು ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಆಗಿ ಆಯ್ಕೆಯಾಗಿರುವುದು ನನಗೆ ಲಭಿಸಿದ ದೊಡ್ಡ ಗೌರವವಾಗಿದೆ. ನಾನು ಆಶ್ಚರ್ಯಚಕಿತನಾಗಿದ್ದೇನೆ. ಕ್ರಿಕೆಟ್‌ನಿಂದ ನನಗೆ ನಾನು ಕಲ್ಪನೆಯನ್ನೂ ಮಾಡಿರದಷ್ಟು  ಸಿಕ್ಕಿದೆ ಎಂದು ಹೇಳಲು ಹೆಮ್ಮೆಪಡುತ್ತೇನೆ’ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: