ಪ್ರಮುಖ ಸುದ್ದಿ

ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ : ಮಣ್ಣಲ್ಲಿ ಮಣ್ಣಾದ ನಟ ಚಿರಂಜೀವಿ ಸರ್ಜಾ

ರಾಜ್ಯ(ಬೆಂಗಳೂರು)ಜೂ.8:- ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಒಕ್ಕಲಿಗ  ಸಂಪ್ರದಾಯದಂತೆ  ಕನಕಪುರ ರಸ್ತೆಯ ನೆಲಗುಳಿ ಫಾರ್ಮ್ ಹೌಸ್ ನಲ್ಲಿ ನೆರವೇರಿದ್ದು ನಟ ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾಗಿದ್ದಾರೆ.

ನಟ ಚಿರಂಜೀವಿ ಸರ್ಜಾ   ನಿನ್ನೆ ಹೃದಯಾಘಾತದಿಂದ  ಸಾವನ್ನಪ್ಪಿದ್ದರು.  ಬಳಿಕ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕಲಾವಿದರು, ಅಭಿಮಾನಿಗಳು ಅನೇಕ ಗಣ್ಯಾತೀಗಣ್ಯರು ಆಗಮಿಸಿ ನಟ ಚಿರಂಜೀವಿ ಸರ್ಜಾರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.  ಬಳಿಕ ಪಾರ್ಥೀವ ಶರೀರವನ್ನ ನೆಲೆಗುಳಿಯಲ್ಲಿರುವ ಧೃವ ಸರ್ಜಾ ಅವರ  ಫಾರ್ಮ್ ಹೌಸ್ ಗೆ ಮೆರವಣಿಗೆ ಮೂಲಕ ತರಲಾಯಿತು.

ನೆಲಗುಳಿ ಫಾರ್ಮ್ ಹೌಸ್ ಬಳಿ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸಂಪ್ರದಾಯದಂತೆ ನೆರವೇರಿತು. ಈ ವೇಳೆ ಪತ್ನಿ ಮೇಘನಾರಾಜ್, ಸಹೋದರ ಧೃವಸರ್ಜಾ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: