ವಿದೇಶ

ಆಸ್ಟ್ರೇಲಿಯಾ ಫುಟ್ಬಾಲ್ ಆಟಗಾರನಿಗೆ ಕೋವಿಡ್-19 ಸೋಂಕು

ಸಿಡ್ನಿ,ಜೂ.9-ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಗೋಲ್ ಕೀಪರ್ ಮಿಚೆಲ್ ಲ್ಯಾಂಗೆರಕ್ ಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಆಸೀಸ್ ಫುಟ್ಬಾಲ್ ಗೋಲ್ ಕೀಪರ್ ಮಿಚೆಲ್ ಜಪಾನ್ ನ ಜೆ ಲೀಗ್ ಪ್ರಥಮ ದರ್ಜೆ ಡಿವಿಷನ್ ಫುಟ್ ಬಾಲ್ ಲೀಗ್ ನಲ್ಲಿ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಇವರಿಗೆ ಕೋವಿಡ್ 19 ಸೋಂಕುತಾಗಿದೆ ಎನ್ನಲಾಗಿದೆ. ಗೋಲ್ ಕೀಪರ್ ಮಿಚೆಲ್ ಗೆ ಯಾವುದೇ ಸೋಂಕು ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೂ ಅವರಲ್ಲಿ ಕೋವಿಡ್ 19 ದೃಢಪಟ್ಟಿದೆ.

ಈ ಪ್ರಕರಣದೊಂದಿಗೆ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ ಇಬ್ಬರು ಆಟಗಾರರಿಗೆ ಕೋವಿಡ್- 19 ಸೋಂಕು ತಾಗಿದಂತಾಗಿದೆ. ಕಳೆದ ವಾರವಷ್ಟೇ ಅದೇ ತಂಡದ ಮತ್ತೋರ್ವ ಆಟಗಾರ ಮು ಕನಾಜಕಿಗೆ ವೈರಸ್ ತಗುಲಿತ್ತು. ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಟಗಾರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. (ಎಂ.ಎನ್)

 

Leave a Reply

comments

Related Articles

error: