ಮೈಸೂರು

ಅರಸು ರಸ್ತೆಯಲ್ಲಿ  ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳ ಕುರಿತು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಜಾಗೃತಿ

ಮೈಸೂರು,ಜೂ.9:-ಮೈಸೂರು ನಗರದಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಮಾಲ್, ಹೋಟೆಲ್, ದೇವಾಲಯಗಳನ್ನು ತೆರೆಯಲಾಗಿದೆ.  ಈಗ ರಾಜ್ಯ ಗಳಲ್ಲದೇ ಅಂತರರಾಜ್ಯ ಜನರೂ ರಾಜ್ಯವನ್ನು ಪ್ರವೇಶಿಸಬಹುದಾಗಿದ್ದು ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮೈಸೂರು ನಗರ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ನೇತೃತ್ವದ ಪೊಲೀಸ್ ತಂಡ  ಇಂದು ನಗರದ ಅರಸು ರಸ್ತೆಯಲ್ಲಿ  ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಓಡಾಡುವಂತೆ ಜಾಗೃತಿ ಮೂಡಿಸಿದೆ.

ಇಂದು ಮಧ್ಯಾಹ್ನದ ವೇಳೆಗೆ ಅರಸು ರಸ್ತೆಗೆ ತೆರಳಿದ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಅವರು ವಾಹನಗಳಲ್ಲಿ ಸಂಚರಿಸುವವರಿಗೆ ಹಾಗೂ ರಸ್ತೆಯಲ್ಲಿ ಓಡಾಡುವವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದರು. ಅಲ್ಲಿನ ಅಂಗಡಿಗಳಲ್ಲಿ ವರ್ತಕರು ಯಾವ ರೀತಿ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆಂದು ಪರಿಶೀಲಿಸಿದರಲ್ಲದೇ, ಗ್ರಾಹಕರು ಯಾವ ರೀತಿ ವರ್ತಿಸುತ್ತಿದ್ದಾರೆಂಬುದನ್ನು ಪರಿಶೀಲಿಸಿದರು.

ಸಾಮಾಗ್ರಿಗಳ ಖರೀದಿಗೆ ಬಂದಾಗ ಅಂತರವನ್ನು ಕಾಯ್ದುಕೊಳ್ಳಿ, ಮುಗಿ ಬೀಳಬೇಡಿ ಎಂದು ಎಚ್ಚರಿಸಿದರು. ಬೇರೆ ಬೇರೆ ಸ್ಥಳಗಳಿಂದ ಬಂದವರಿರುತ್ತಾರೆ. ಸೂಕ್ಷ್ಮವಾಗಿ ಪರಿಶೀಲಿಸಿ ಅವರಿಂದ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭ ಎಎಸ್ ಐ, ಪೊಲೀಸ್ ಸಿಬ್ಬಂದಿಗಳು  ಡಿಸಿಪಿ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: