ಮೈಸೂರು

ವಸತಿಗೃಹದಲ್ಲಿ ಚಿನ್ನಾಭರಣ ಕಳುವು

ವಸತಿ ಗೃಹವೊಂದರಲ್ಲಿ ಚಿನ್ನಾಭರಣ ಕಳವು ಆಗಿರುವ ಘಟನೆ ಮೈಸೂರಿನ ಹೈವೇ ವೃತ್ತದ ಬಳಿ ಇರುವ ಐಶ್ವರ್ಯ ಸೂಟ್ಸ್ ನಲ್ಲಿ ನಡೆದಿದೆ.

ವಸತಿ ಗೃಹದಲ್ಲಿ ತಂಗಿದ್ದ  ಗುಂಡ್ಲುಪೇಟೆಯ ಜಕ್ಕಳ್ಳಿ ಗ್ರಾಮದ ನಿವಾಸಿ ಮಹೇಶ್ವರಿ ಎಂಬುವರಿಗೆ ಸೇರಿದ ಒಂದು ಉಂಗುರ, ಸರ ಸೇರಿ 45 ಗ್ರಾಂ ಚಿನ್ನಾಭರಣ ಕಳುವಾಗಿದೆ.  ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: