ಮೈಸೂರು

ನಂಜನಗೂಡು ಪಟ್ಟಣದಲ್ಲಿ 42ದಿನಗಳ ಬಳಿಕ ಕಾಣಿಸಿಕೊಂಡ ಕೊರೋನಾ ಸೋಂಕು

ಮೈಸೂರು,ಜೂ.10:- ಕೊನೆಯದಾಗಿ ಕೊರೋನಾ ಸೋಂಕು ಕಾಣಿಸಿಕೊಂಡ 42ದಿನಗಳ ಬಳಿಕ ನಂಜನಗೂಡು ಪಟ್ಟಣದಲ್ಲಿ ಮತ್ತೊಂದು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ.

ವ್ಯಾಸಂಗಕ್ಕಾಗಿ ಉತ್ತರಪ್ರದೇಶಕ್ಕೆ ತೆರಳಿದ್ದ ನೀಲಕಂಠ ನಗರದ ಬಡಾವಣೆಯ 22ವರ್ಷದ ಯುವಕನಲ್ಲಿ ಕೊರೋನಾ ಇರುವುದು ದೃಢಪಟ್ಟಿದ್ದು ಮೈಸೂರಿನ ಕೋವಿಡ್ ಆಸ್ಪತ್ರೆಗೆ ಚಿಕಿತಯ್ಸೆಗಾಗಿ ದಾಖಲಿಸಲಾಗಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಕ್ವಾರೆಂಟೈನ್ ಮಾಡಲಾಗಿದೆ. ಯುವಕನ ಮನೆಯ 100ಮೀಟರ್ ಸುತ್ತಳತೆಯಲ್ಲಿ ಸೀಲ್ ಡೌನ್ ಮಾಡಲಾಗಿದ್ದು 25ಕ್ಕೂ ಹೆಚ್ಚು ಕುಟುಂಬಗಳು ಸೀಲ್ ಡೌನ್ ವ್ಯಾಪ್ತಿಗೊಳಪಟ್ಟಿವೆ. ಉತ್ತರಪ್ರದೇಶದ ದಿಯೋಬಾಚಿಡ್ ನಗರದಲ್ಲಿ ಅರೇಬಿಕ್ ವ್ಯಾಸಂಗಕ್ಕಾಗಿ ಯುವಕ ತೆರಳಿದ್ದ. ದೆಹಲಿಮಾರ್ಗವಾಗಿ ಮೇ.20ರಂದು ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಮೇ.22ರಂದು ಬೆಂಗಳೂರಿಗೆ ಬಂದ  ಈತ ಮದರಸದಲ್ಲಿ ಸೌಲಭ್ಯ ಸಹಿತ ಕ್ವಾರೆಂಟೈನ್ ಗೆ ಒಳಪಟ್ಟಿದ್ದ. ಾದರೆ ತಪಾಸಣೆಗೊಳಪಡಿಸದೆ ಕೇವಲ ಕ್ವಾರೆಂಟೈನ್ ಮಾಡಲಾಗಿತ್ತು ಎನ್ನಲಾಗಿದೆ. 7ದಿನಗಳನ್ನು ಪೂರೈಸಿದ ಬಳಿಕ ಹೋಂಕ್ವಾರೆಂಟೈನ್ ಗಾಗಿ ಜೂ.1ರಂದು ನಂಜನಗೂಡಿಗೆ ಬಂದಿಳಿದ ಈತ ತಾಲೂಕು ಆಡಳಿತಕ್ಕೆ ಮಾಹಿತಿ ಕೊಟ್ಟಿದ್ದು ಬಳಿಕ ಯುವಕನ ಪ್ರಯಾಣ, ಕೊರೋನಾ ಪರೀಕ್ಷೆ ಕುರಿತು ಮಾಹಿತಿ ಕಲೆಹಾಕಿದಾಗ ಯಾವುದೇ ತಪಾಸಣೆಗೆ ಒಳಪಡದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: