ಪ್ರಮುಖ ಸುದ್ದಿಮೈಸೂರು

ಮೈಮುಲ್ ಆಯ್ಕೆ ಪ್ರಕ್ರಿಯೆಗೆ  ನ್ಯಾಯಾಲಯ ತಡೆ ;ನಮ್ಮ ಹೋರಾಟಕ್ಕೆ ಜಯ : ಶಾಸಕ ಸಾ.ರಾ.ಮಹೇಶ್ ಸಂತಸ

ಮೈಸೂರು,ಜೂ.10:- ಮೈಮುಲ್ ಆಯ್ಕೆ ಪ್ರಕ್ರಿಯೆಗೆ  ನ್ಯಾಯಾಲಯ ತಡೆ ನೀಡಿದ್ದಲ್ಲದೇ ಸರ್ಕಾರಕ್ಕೆ ಮಾಹಿತಿ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.  ಯಾವುದೇ ಆಯ್ಕೆ ಪ್ರಕ್ರಿಯೆ ಮಾಡುವಾಗ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ. ನಮ್ಮ ಹೋರಾಟಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಎಂದು ಶಾಸಕ ಸಾ.ರಾ.ಮಹೇಶ್ ಸಂತಸ ವ್ಯಕ್ತಪಡಿಸಿದರು.

ತಮ್ಮ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಯಾವುದೇ ಆಯ್ಕೆ ಪ್ರಕ್ರಿಯೆ ಮಾಡುವಾಗ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ. ನಮ್ಮ ಹೋರಾಟಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಈಗಲಾದರೂ ಸರ್ಕಾರ ಆಯ್ಕೆ ಪ್ರಕ್ರಿಯೆ ಮಾಡಿದ್ದ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಬೇಕು . ಸುಮಾರು 40 ಕೋಟಿ ಹಗರಣ ನಡೆದಿದೆ . ಬ್ಲ್ಯಾಕ್ ಲೀಸ್ಟ್ಗೆ ಸೇರಿಸಬೇಕು  ಚಾಮರಾಜನಗರ ಹಾಲು ಉತ್ಪಾದಕರ ಸಂಘದ ಆಯ್ಕೆ ಆಗಿರುವ ಸಿಬ್ಬಂದಿಯನ್ನು ವಜಾ ಗೊಳಿಸಿ . ಪರೀಕ್ಷೆ ನಡೆದ ಕಾಲೇಜಿನ ಮಾನ್ಯತೆ ರದ್ದು ಮಾಡಿ.  ಉಸ್ತುವಾರಿ ಹಾಗೂ ಸಹಕಾರ ಸಚಿವರು ಒತ್ತಡಕ್ಕೆ ಮಣಿಯುತ್ತಿದ್ದಾರೆ. ಈ ವಿಚಾರದಲ್ಲಿ ಯಾರಿಗೆ ಏನು ಶೇರ್ ಹೋಗಿದೆ ಅಂತಾ ನಿಮಗೆ ಗೊತ್ತಿದೆ ಎಂದರು.

ಜಿಲ್ಲೆಯ ಪ್ರಭಾವಿ ಮುಖಂಡರು  ಹಿಂದೆ ಸೋನಿಯಾ ಗಾಂಧಿ ಅವರಿಗೆ ಏನಂತಾ ಪತ್ರ ಬರೆದಿದ್ದರು, ವಿಶ್ವನಾಥ್ ಸೂಕ್ಷ್ಮ ಸಮಾಜಗಳಿಗೆ ನೀವು ಎಂ ಎಲ್ ಸಿ ಸ್ಥಾನ ಕೊಡಬೇಕು ಅಂತ ಪತ್ರ ಬರೆದಿದ್ರಿ,ಈ ಮಾತನ್ನ ನೀವು ಮರೆತು ಬಿಟ್ರಾ? ಎಲ್ಲಿ ಹೋಯ್ತು ನಿಮ್ಮ ಸಾಮಾಜಿಕ ನ್ಯಾಯ ?  ನೀವು ಅತಿ ಸೂಕ್ಷ್ಮ ಸಮಾಜಕ್ಕೆ ಸೇರಿದ್ದೀರಾ ಎನ್ನುವ ಮೂಲಕ ವಿಶ್ವನಾಥ್ ಎಂ ಎಲ್ ಸಿ ಆಸೆಗೆ ವ್ಯಂಗ್ಯ ವಾಡಿದರು. ಮಗ ಜಿಲ್ಲಾ ಪಂಚಾಯತ್ ಸದಸ್ಯ ಅವರು ಯಾವ ಪಕ್ಷದಿಂದ ಗೆದ್ದಿದ್ರು ? ಕೊಳಕು ಮನುಸ್ಸು ,ದೇಹ ಚಿಂತನೆ ಯಾರದ್ದು ಅಂತ ಜಿಲ್ಲೆಯ ಜನ ತೀರ್ಮಾನ ಮಾಡ್ತಾರೆ  ಎನ್ನುವ ಮೂಲಕ ಕೊಚ್ಚೆಗೆ ಕಲ್ಲು ಹೊಡೆದು ನಾನ್ಯಾಕೆ  ಕೊಚ್ಚೆ ಆಗಲಿ ಅಂತ ರಿಯಾಕ್ಟ್ ಮಾಡಿದ್ದ  ವಿಶ್ವನಾಥ್ ಹೇಳಿಕೆಗೆ ಟಾಂಗ್ ನೀಡಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕೋವಿಡ್  ಸಂದರ್ಭದಲ್ಲಿ ರಾಜಕೀಯ ಮಾಡದೇ ಸರ್ಕಾರದ ನಿರ್ಧಾರಗಳಿಗೆ ನಾವು ಬೆಂಬಲಿಸಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅನುಭವ ಇರುವ ರಾಜಕಾರಣಿಗಳು. ಈಗಾಗಲೇ ಈ ಬಗ್ಗೆ ಅವರು ತಜ್ಞ ರಿಂದ ಪರೀಕ್ಷೆ ನಡೆಸಿರುವ ಬಗ್ಗೆ ಮಾಹಿತಿ ಪಡೆದಿರುತ್ತಾರೆ. 10 ನೇ ತರಗತಿ ಪರೀಕ್ಷೆ ನಡೆದಲ್ಲಿ ಸಾರ ಬಳಗದಿಂದ ಮೈಸೂರಿನ ಮಕ್ಕಳಿಗೆ ಎನ್. 95ಮಾಸ್ಕ್ ವಿತರಿಸುತ್ತೇವೆ ಎನ್ನುವ ಮೂಲಕ 10 ನೇ ತರಗತಿ ಪರೀಕ್ಷೆಗೆ ಹಲವು ವಿರೋಧದ ನಡುವೆಯೂ ಬೆಂಬಲಿಸಿದರು.

ದೇವೇಗೌಡರು ರಾಜ್ಯಸಭೆಗೆ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ  ಜೆಡಿಎಸ್ ಪಕ್ಷದ ಮೇಲೆ ಯಾರ ಋಣವು ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿನ ತುಂಬಾ ಜನ ದೇವೇಗೌಡರ ಋಣ ತೀರಿಸಬೇಕಿದೆ. ಈಗ ಯಾರ್ಯಾರು ಜೆಡಿಎಸ್ ಬೈಯ್ಯುತ್ತಿದ್ದಾರೆ ಅವರೆಲ್ಲ ದೇವೇಗೌಡರ ಗರಡಿಯಲ್ಲಿ ಪಳಗಿದವರೇ. ದೇವೇಗೌಡರು ರಾಜಕೀಯಕ್ಕೆ ಬರಿ ಮೇಸ್ಟ್ರಲ್ಲ ಅವರೇ ಪ್ರಿನ್ಸಿಪಲ್‌ ಕೂಡ. ಹಾಗಾಗಿ ಜೆಡಿಎಸ್ ಪಕ್ಷದ ಮೇಲೆ ಯಾರ ಋಣವು ಇಲ್ಲ.ತುಂಬಾ ನಾಯಕರು ದೇವೇಗೌಡರ ಋಣ ತೀರಿಸಬೇಕಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: