ಪ್ರಮುಖ ಸುದ್ದಿಮೈಸೂರು

ಕಮರ್ಶಿಯಲ್ ಟ್ಯಾಕ್ಸ್ ಜಾಯಿಂಟ್ ಕಮೀಷನರ್ ಬೆಂಗಳೂರು-ಮೈಸೂರು ನಿವಾಸದ ಮೇಲೆ ಎಸಿಬಿ ದಾಳಿ

ಮೈಸೂರು,ಜೂ.10:- ಕಮರ್ಶಿಯಲ್ ಟ್ಯಾಕ್ಸ್ ಜಾಯಿಂಟ್ ಕಮೀಷನರ್ ಆಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್ ಕುಮಾರ್ ಅವರ ಬೆಂಗಳೂರು,ಮೈಸೂರು, ನಿವಾಸ ಮತ್ತು ಸಂಬಂಧಿಕರ ನಿವಾಸದ ಮೇಲೆ ಏಕಕಾಲದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆದಿದೆ.

ಸತೀಶ್ ಕುಮಾರ್ ಅವರು ಬೆಂಗಳೂರಿನಲ್ಲಿ ಕಮರ್ಶಿಯಲ್ ಟ್ಯಾಕ್ಸ್ ಜಾಯಿಂಟ್ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೈಸೂರಿನ ಅವರ ಟಿ.ಕೆ.ಲೇ ಔಟ್ ನಲ್ಲಿರುವ ನಿವಾಸದ ಮೇಲೆ ಮೂರು ಖಾಸಗಿ ವಾಹನಗಳಲ್ಲಿ ಬಂದ ನಗರದ ಎಸಿಬಿ ಘಟಕದ ಸೂಪರಿಂಟೆಂಡೆಂಟ್ ರಶ್ಮಿ ಅವರ ನೇತೃತ್ವದಲ್ಲಿ ಎಸಿಬಿ ದಾಳಿ ನಡೆದಿದ್ದು,ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ನಿವಾಸದ ಮೇಲೆಯೂ ದಾಳಿ ನಡೆದಿದೆ ಎನ್ನಲಾಗಿದ್ದು, ಅವರ ಸಂಬಂಧಿಕರ ನಿವಾಸದ ಮೇಲೆಯೂ ದಾಳಿ ನಡೆದಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: