ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮುಚ್ಚಿರುವ ಕಾರ್ಖಾನೆಗಳನ್ನು ತೆರೆಯಲು ಭಾರತ ಕಮ್ಯುನಿಷ್ಟ್ ಪಕ್ಷ ಮೈಸೂರು ಜಿಲ್ಲಾ ಸಮಿತಿ ಒತ್ತಾಯ

ಮೈಸೂರು,ಜೂ.10:-ಮೈಸೂರು ಜಿಲ್ಲೆಯಲ್ಲಿ ಮುಚ್ಚಿರುವ ಕಾರ್ಖಾನೆಗಳನ್ನು ತೆರೆಯಲು ಭಾರತ ಕಮ್ಯುನಿಷ್ಟ್ ಪಕ್ಷ ಮೈಸೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಬಸವರಾಜು ಕೆ.ಮಾತನಾಡಿ ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ನಂಜನಗೂಡಿನ ರೀಡ್ ಅಂಡ್ ಟೇಲರ್ ಕಾರ್ಖಾನೆ ,ರೆಹಾನ್ಸ್ ನಲ್ಲಿ 100 ಸದರನ್ ಸ್ಟಾರ್ ಹೋಟೆಲ್ ನಲ್ಲಿ 160ಜನ ಕೆಲಸ ಕಳೆದುಕೊಂಡಿದ್ದಾರೆ. ಮುಚ್ಚಿದ ಕಾರ್ಖಾನೆಗಳನ್ನು ಮತ್ತು ಹೋಟೆಲ್ ಗಳನ್ನು ತಕ್ಷಣ ತೆರೆದು ಎಲ್ಲಾ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿದರು.

ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು. ಎಲ್ಲರಿಗೂ ವೇತನ ನೀಡಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿದ್ದರೂ ಕಾರ್ಖಾನೆಯ ಮಾಲೀಕರು ಇದನ್ನು ತಿರಸ್ಕರಿಸಿದ್ದಾರೆ. ಜಿಲ್ಲಾಡಳಿತ ಕೂಡ ಈ ಬಗ್ಗೆ ಗಮನ ಹರಿಸಿಲ್ಲ. ನಗರದ ವಿಕ್ರಾಂತ್ ಕಾರ್ಖಾನೆಯಲ್ಲಿ 4250ಕಾರ್ಮಿಕರಿದ್ದಾರೆ. ಇವರಿಗೆ 50%ಸಂಬಳ ಮಾತ್ರ ನೀಡಲಾಗಿದೆ. 1500ಗುತ್ತಿಗೆ ಕಾರ್ಮಿಕರಿಗೆ ಕೆಲಸ ನಿರಾಕರಿಸಲಾಗಿದೆ. ಟ್ರೆಟ್ರಾನಿಕ್ಸ್ ಮತ್ತು ಬಿಎಸ್ ಎನ್ ಎಲ್ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡಿಲ್ಲ. ಮೈಸೂರು ಜಿಲ್ಲೆಯಲ್ಲಿ ಸುಮಾರು 50ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ಅವರು ಸಂಕಷ್ಟದಲ್ಲಿದ್ದಾರೆ. 2,3 ಅಥವಾ 5ಜನ ಕೆಲಸ ಮಾಡುವ ಸಣ್ಣ ಮತ್ತು ಅತಿ ಸಣ್ಣ ಕಾರ್ಖಾನೆಗಳಲ್ಲಿ/ ವರ್ಕ್ ಶಾಪ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಹ ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಮೈಸೂರಿನಲ್ಲಿ ಸುಮಾರು 12ಸಾವಿರ ಹೋಟೆಲ್ ಕಾರ್ಮಿಕರಿದ್ದು ಇವರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೇ ಸೋಮವಾರದಿಂದ ಹೋಟೆಲ್ ಗಳು ತೆರೆದಿದ್ದು 20% ಕಾರ್ಮಿಕರಿಗೆ   ಮಾತ್ರಕೆಲಸನೀಡಲಾಗಿದೆ. ಜಿಲ್ಲಾಡಳಿತ ಕಾರ್ಮಿಕ ಇಲಾಖೆ ಜಿಲ್ಲೆಯ ಕೈಗಾರಿಕಾ ಕಾರ್ಮಿಕರ ಸಂಬಂಧ ಸಭೆ ನಡೆಸಬೇಕು. ಕೇಂದ್ರ ಸರ್ಕಾರದ ಆದೇಶದಂತೆ ಲಾಕ್ ಡೌನ್ ಅವಧಿಯ ಪೂರ್ಣ ವೇತನ ಸಿಗಬೇಕು. ಕೆಲಸ ನಿರಾಕರಿಸಲ್ಪಟ್ಟಿರುವ ಕಾರ್ಮಿ ಕರಿಗೆಕೆಲಸ ಸಿಗಬೇಕು. ಮುಚ್ಚಿರುವ ಕಾರ್ಖಾನೆಗಳನ್ನು, ಕೆಲಸದ ತಾಣಗಳನ್ನು ತಕ್ಷಣ ತೆರೆಯಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಲ.ಜಗನ್ನಾಥ್, ಜಗದೀಶ್, ಸೂರ್ಯ,ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್ )

Leave a Reply

comments

Related Articles

error: