ಮೈಸೂರು

ಶ್ರೀ ಸಪ್ತಶ್ರೀ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಶಾಲಾ ದಾಖಲಾತಿ ಕುರಿತು ಪೋಷಕರ ಸಭೆ

ಮೈಸೂರು,ಜೂ.10:- ಇಂದು ಶ್ರೀ ಸಪ್ತಶ್ರೀ ವೈದಿಕ ಗುರುಕುಲ ಸೇವಾಶ್ರಮದಲ್ಲಿ ( ಕೆ.ಅರ್‌.ಎಸ್ ರಸ್ತೆ , ಮಂಟಿ ) ಎನ್‌.ಟಿ.ಎಂ.ಎಸ್  ಮಹಾರಾಣಿ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು  ಪೋಷಕರ ಸಭೆ ಸೇರಿಸಲಾಗಿತ್ತು.

ಕಳೆದ ವರ್ಷ 50 ಮಕ್ಕಳು ಇದ್ದು  ಈ ವರ್ಷ ಇನ್ನೂ ಹೆಚ್ಚು ಮಕ್ಕಳನ್ನು ಸೇರಲು ಬಯಸಿದ್ದು, ಈ ಸಭೆಯಲ್ಲಿ 14 ಜನ ಮಕ್ಕಳು ಎನ್.ಟಿ‌.ಎಂ.ಎಸ್ ಶಾಲೆಗೆ ಸೇರಲು ಮುಂದಾಗಿದ್ದಾರೆ. ನಾಳೆ‌ ಇಂದ ಶಾಲೆ ಆರಂಭವಾಗುವವರೆಗೆ ಶ್ರೀ ಸಪ್ತಶ್ರೀ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಎನ್.ಟಿ.ಎಂ.ಎಸ್ ಶಾಲೆಯ ಮಕ್ಕಳಿಗೆ ಉಚಿತ ವ್ಯಕ್ತಿ ವಿಕಸನ ಕಾರ್ಯಾಗಾರ ತರಬೇತಿಯನ್ನು ಪ್ರತಿದಿನ ಬೆಳಗ್ಗೆ 10 ರಿಂದ 11 ರ ವರೆಗೆ ಶಿವಮೊಗ್ಗ ಜಿಲ್ಲೆಯ ರಂಗಾಯಣದಲ್ಲಿ ಮೂರು ವರ್ಷ ತರಬೇತಿ ಪಡೆದ ಮಂಜು ಅವರು ನೀಡುತ್ತೇನೆ ಎಂದರು. ಈ ಕಾರ್ಯಾಗಾರ ನಾಳೆಯಿಂದಲೇ ಆರಂಭವಾಗಲಿದೆ.  ಶಾಲೆ ಪ್ರಾರಂಭವಾದ ನಂತರವೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಶಾಲೆಯಲ್ಲೇ ಕೊಡಲು ಮುಂದಾಗಿದ್ದಾರೆ

ನಗರದ ಮಹಾರಾಣಿ ಸರ್ಕಾರಿ ಪ್ರೌಢಶಾಲೆಗೂ ಹೆಣ್ಣು ಮಕ್ಕಳನ್ನು ಸೇರಿಸಲು ಅಲ್ಲಿಯ ಶಿಕ್ಷಕರಾದ ಮೋಹನ್ ಕುಮಾರ್  ಮತ್ತು ಕೃಷ್ಣಪ್ಪ ಅವರು ಬಂದಿದ್ದು, ಇ-  ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ನಮ್ಮ ಶಾಲೆಯಲ್ಲಿ ಮಕ್ಕಳನ್ನು ಸೇರಿಸಿದರೆ ಕಾಲೇಜಿನ ತನಕ ವಿದ್ಯಾರ್ಥಿಗಳು ಓದಬಹುದು ಎಂದು ಪೋಷಕರಿಗೆ ಮಾಹಿತಿ ನೀಡಿದರು.  ಆ ಶಾಲೆಗೂ ಮಕ್ಕಳು ದಾಖಲಾಗಲು ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ಶ್ರೀ ಸಪ್ತಶ್ರೀ ವೈದಿಕ ಗುರುಕುಲ ಸೇವಾಶ್ರಮದ ಗುರುಗಳಾದ ಅಭಿನವ ರಾಮಾನುಜಾಚಾರ್ಯರು, ಎನ್.ಟಿ.ಎಂ.ಎಸ್ ಹೋರಾಟ ಸಮಿತಿಯ  ಕರುಣಾಕರ್ , ಅರವಿಂದ್ ಶರ್ಮ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: