ಕರ್ನಾಟಕಪ್ರಮುಖ ಸುದ್ದಿ

ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಪಡೆದ ಸಚಿವ ಬಸವರಾಜ ಬೊಮ್ಮಾಯಿ

ಧರ್ಮಸ್ಥಳ,ಜೂ.10-ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶ್ರೀ ಮಂಜುನಾಥಸ್ವಾಮಿ ದೇವರ ದರ್ಶನ ಪಡೆದರು.

ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರಕಾರದ ಆದೇಶ ಪಾಲನೆಯೊಂದಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಾದರಿಯಾಗಿದೆ ಎಂದರು.

ಇಡೀ ವಿಶ್ವವೇ ಕೋವಿಡ್‌-19ನಿಂದ ಮುಕ್ತಿ ಹೊಂದಲಿ. ಎಲ್ಲರೂ ಆರೋಗ್ಯದೊಂದಿಗೆ ಶಾಂತಿ ಸುಭಿಕ್ಷೆಯಿಂದ ಜೀವನ ನಡೆಸುವಂತಾಗಲಿ ಎಂದು ಶ್ರೀ ಮಂಜುನಾಥಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಈ ಸಂದರ್ಭ ಶಾಸಕ ಹರೀಶ್‌ ಪೂಂಜ, ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಗೌಡ ಕೈಕುರೆ, ಶ್ರೀನಿವಾಸ ರಾವ್‌, ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್‌, ಡಿವೈಎಸ್‌ಪಿ ವೆಲಂಟೆನ್‌ ಡಿಸೋಜಾ, ತಹಸೀಲ್ದಾರ್‌ ಗಣಪತಿ ಶಾಸ್ತ್ರಿ, ಪಿಡಬ್ಲೂತ್ರ್ಯಡಿ ಎಇಇ ಶಿವಪ್ರಸಾದ್‌ ಅಜಿಲ, ಪ್ರಮುಖರಾದ ರಕ್ಷಿತ್‌ ಶೆಟ್ಟಿ, ಯಶವಂತ್‌ ಬೆಳಾಲು ಮತ್ತಿತರರು ಇದ್ದರು. (ಎಂ.ಎನ್)

 

 

Leave a Reply

comments

Related Articles

error: