ಪ್ರಮುಖ ಸುದ್ದಿ

ಎರಡು ಮಕ್ಕಳ ತಾಯಿ ಟಿಕ್ ಟಾಕ್ ನಲ್ಲಿ ಪರಿಚಯವಾದವನ ಜೊತೆ ಪರಾರಿ

ರಾಜ್ಯ(ಬೀದರ್)ಜೂ.11:-  9 ವರ್ಷಗಳ ಕಾಲ ದಾಂಪತ್ಯ ಜೀವನ ಮಾಡಿದ್ದ ಎರಡು ಮಕ್ಕಳ ತಾಯಿಯೊಬ್ಬಳು ಟಿಕ್‌ಟಾಕ್​ನಲ್ಲಿ ಪರಿಚಯವಾದವನ ಪ್ರೀತಿಗೆ ಮರುಳಾಗಿ ಕಟ್ಟಿಕೊಂಡ ಗಂಡನನ್ನು ಬಿಟ್ಟು ಮನೆಯಿಂದ ಓಡಿಹೋದ ಘಟನೆ ನಗರದ ಹೊರವಲಯದ ಚಿಟ್ಟಾವಾಡಿಯಲ್ಲಿ ನಡೆದಿದೆ.

ಈ ಸಂಬಂಧ ನೊಂದ ಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.ಸತೀಶ್‌ ದೇಸಾಯಿ ಎಂಬಾತ ನೊಂದ ಪತಿ. ಈತ ಒಂಭತ್ತು ವರ್ಷಗಳ ಹಿಂದೆ ಪ್ರಿಯಾಂಕಾ ಎಂಬಾಕೆಯೊಂದಿಗೆ ಮದುವೆಯಾಗಿದ್ದ. ಬಳಿಕ ಹೆಂಡತಿಯನ್ನು ಡಿಪ್ಲೋಮಾ ಇನ್ ನರ್ಸಿಂಗ್ ಕೋರ್ಸ್ ಓದಿಸಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.  ಪತ್ನಿಗೆ ಟಿಕ್‌ಟಾಕ್​ನಲ್ಲಿ ಯುವಕನೊಬ್ಬನ ಜೊತೆ ಪ್ರೇಮವಾಗಿದೆ. ಈ ಎರಡು ಮಕ್ಕಳ ತಾಯಿ ಮೋಹದ ಪ್ರೀತಿಗೆ ಮರುಳಾಗಿ ಮಕ್ಕಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ನೊಂದ ಪತಿ ಹೇಳಿಕೊಂಡಿದ್ದಾನೆ. ತನ್ನ ಹೆಂಡತಿ ಮಾಡಿದ ಈ ತಪ್ಪಿನಿಂದ ನಾನು ಮಕ್ಕಳನ್ನೂ ನೋಡಲಾಗ್ತಿಲ್ಲ. ನನಗೆ ನನ್ನ ಮಕ್ಕಳನ್ನು ಹುಡುಕಿ ಕೊಡಿ ಎಂದು ಗಾಂಧಿ ಗಂಜ್ ಪೊಲೀಸರಿಗೆ ದೂರು ನೀಡಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: