ಮೈಸೂರು

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ಹೊತ್ತಿ ಉರಿದ ಕಾರು

ಮೈಸೂರು,ಜೂ.11:- ಚಾಮರಾಜನಗರದಿಂದ ವಾಪಸ್ ಮೈಸೂರಿಗೆ ಬರುತ್ತಿದ್ದಾಗ ತಿ.ನರಸೀಪುರ ರಸ್ತೆಯಲ್ಲಿ ಕಾರು ಆಕಸ್ಮಿಕವಾಗಿ ಹೊತ್ತಿಕೊಂಡು ಉರಿದಿದೆ. ಕುಟುಂಬ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಮೈಸೂರಿನ ಪೊಲೀಸ್ ಲೇ ಔಟ್ ನಿವಾಸಿ ನಿವೃತ್ತ ಹೆಡ್ ಕಾನ್ಸಟೇಬಲ್ ಬಸವಣ್ಣ ಎಂಬವರು ಚಾಮರಾಜನಗರದಿಂದ ಮೈಸೂರಿಗೆ ಮಾರುತಿ ಜೆನ್ ಕಾರಿನಲ್ಲಿ ಬರುವಾಗ ನಿನ್ನೆ ರಾತ್ರಿ ಸುಮಾರು 8ಗಂಟೆಯ ವೇಳೆಗೆ   ಚಿಕ್ಕಹಳ್ಳಿಬಳಿ ಚಾಲನೆಯಲ್ಲಿದ್ದ  ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದಾರೆ. ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: