ಮೈಸೂರು

ಕಾವೇರಿ ವಿವಾದ: ರಾಜ್ಯ ಸರ್ಕಾರದ ನಿರ್ಣಯವನ್ನು ಬೆಂಬಲಿಸುತ್ತೇವೆ: ಪ್ರತಾಪ್‍ ಸಿಂಹ

ಮುಂದಿನ ಎರಡು ದಿನ ನಿತ್ಯ 6,000 ಕ್ಯೂಸೆಕ್ ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಿಂದ ನನಗೆ ಮತ್ತು ಕರ್ನಾಟಕ ಬಿಜೆಪಿ ತೀವ್ರ ಬೇಸರವಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪತ್ರಿಕಾ ಹೇಳಿಕೆಯಲ್ಲಿ, “ಸುಪ್ರೀಂ ಕೋರ್ಟ್‍ ತೀರ್ಪಿನಿಂದ ರಾಜ್ಯದ ಜನರಿಗೆ ಬೇಸರ ಮತ್ತು ಗೊಂದಲ ಉಂಟಾಗಿದೆ. ಜತೆಗೆ, ತಮಿಳುನಾಡು ಸರಕಾರ ನಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಕರ್ನಾಟಕಕ್ಕೆ ತೊಂದರೆ ನೀಡುತ್ತಿದೆ”.

ಏನೇ ಆದರೂ ಕರ್ನಾಟಕ ಬಿಜೆಪಿ ರಾಜ್ಯದ ಜನರೊಂದಿಗೆ ಇರಲಿದೆ. ರಾಜ್ಯ ಸರಕಾರ ಯಾವ ನಿರ್ಧಾರ ತೆಗೆದುಕೊಂಡರು ನಾವದನ್ನು ಬೆಂಬಲಿಸುತ್ತೇವೆ. ರಾಜಕೀಯ ಭಿನ್ನಮತಕ್ಕಿಂತ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವುದು ಮುಖ್ಯ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮೂವರು ಕೇಂದ್ರ ಸಚಿವರು ಮತ್ತು ಬಿಜೆಪಿಯ ಎಲ್ಲ ಸಚಿವರು ಕರ್ನಾಟಕಕ್ಕೆ ನ್ಯಾಯ ದೊರಕಿಸುವಂತೆ ಸಂಸತ್ತಿನಲ್ಲಿ ದನಿ ಎತ್ತಲಿದ್ದೇವೆ. ಯಾವುದೇ ಕಾರಣಕ್ಕೂ ರಾಜ್ಯದ ಹಿತಾಸಕ್ತಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Leave a Reply

comments

Tags

Related Articles

error: