ಪ್ರಮುಖ ಸುದ್ದಿ

ಕೆಆರ್ ಎಸ್ ನಲ್ಲಿ  ರಾತ್ರಿ ನಡೆದ ರೇವ್ ಪಾರ್ಟಿ ಪ್ರಕರಣ : 34 ಜನರ ವಿರುದ್ಧ ಎಫ್ ಐ ಆರ್

ರಾಜ್ಯ( ಮಂಡ್ಯ)ಜೂ.11:- ಕೆಆರ್ ಎಸ್ ನಲ್ಲಿ  ರಾತ್ರಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 34 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 34 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 268, 271, 290, 92(ಐ) ಅಡಿ ಪ್ರಕರಣ ದಾಖಲಾಗಿದೆ. ಎಲ್ಲಾ 34 ಮಂದಿಯನ್ನು ವಶಕ್ಕೆ ಪಡೆದು ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕೆ.ಆರ್.ಎಸ್ ಠಾಣೆಯ ಪಿಎಸ್ ಐ ಮಾಹಿತಿ ನೀಡಿದ್ದಾರೆ.

ನಿನ್ನೆ ರಾತ್ರಿ ಕೆಆರ್ ಎಸ್ ಡ್ಯಾಂ ಪಕ್ಕದಲ್ಲೇ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮೈಸೂರಿನ ಸಂಜಯ್ ಎಂಬವರ ತೋಟದಲ್ಲಿ ಆಯೋಜನೆಮಾಡಲಾಗಿತ್ತು. ಕೆಆರ್ ಎಸ್ ಡ್ಯಾಂ ಪಕ್ಕ, ಪೊಲೀಸ್ ಠಾಣೆ ಸಮೀಪದಲ್ಲೇ ಪಾರ್ಟಿ ನಡೆದಿತ್ತು. ಪಾರ್ಟಿ ಆಯೋಜಕರು ಶಾಮಿಯಾನ, ಆರ್ಕೆಸ್ಟ್ರಾ ಧ್ವನಿ ವರ್ಧಕ ಬಳಸಿದ್ದರು. ಅನುಮತಿ ಪಡೆಯದೆ ಗುಂಡು, ತುಂಡು ಪಾರ್ಟಿ ನಡೆದಿತ್ತು. ಪಾರ್ಟಿಯಿಂದ ಸ್ಥಳೀಯರಿಗೆ ಕಿರಿಕಿರಿಯಾದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಲು ಹೋದ ಸ್ಥಳೀಯರಿಗೆ ಪಾರ್ಟಿ ಆಯೋಜಕರು ಆವಾಜ್ ಹಾಕಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: