ಮೈಸೂರು

ಡಿ ದೇವರಾಜ ಅರಸ್ ಅವರ ಪುತ್ರಿ ಭಾರತೀ ಅರಸ್ ಬೆಂಬಲ ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಏಕಪ್ರತಿಮೆ ಹೋರಾಟ ಸಮಿತಿ

ಮೈಸೂರು,ಜೂ.11:- ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸ್ ಅವರ ಪುತ್ರಿ ಭಾರತೀ ಅರಸ್ ಅವರನ್ನು ಸಿದ್ದಾರ್ಥ ಬಡಾವಣೆಯ ಅವರ ಸ್ವಗೃಹದಲ್ಲಿಂದು  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ಭೇಟಿ ಮಾಡಿ ಅವರ ಬೆಂಬಲವನ್ನು ತೆಗೆದುಕೊಳ್ಳಲಾಯಿತು.

ನಾಲ್ವಡಿ ಅವರ ಪ್ರತಿಮೆಯೊಂದನ್ನು ಮಾತ್ರ ಕೆ‌.ಅರ್.ಎಸ್ ನಲ್ಲಿ ಪ್ರತಿಷ್ಠಾಪಿಸಬೇಕು. ಇದಕ್ಕೆ ನಮ್ಮ ಬೆಂಬಲವೂ ಇದೆ.  ನಾಲ್ವಡಿ ಅವರು ಕೊಟ್ಟಿರುವ  ಕೊಡುಗೆ ಮೈಸೂರು ಸಂಸ್ಥಾನಕ್ಕೆ ಅಪಾರ. ಅವರ ಸಮನಾಗಿ ಯಾರನ್ನೂ ಯೋಚಿಸಲೂ ಸಾಧ್ಯವಿಲ್ಲ. ಎಲ್ಲಾ ಹಿಂದುಳಿದ ವರ್ಗದವರನ್ನು ಮೇಲಕ್ಕೆ ತರುವ ಅವರ ತುಡಿತವೇ ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ವಿಶ್ವೇಶ್ವರಯ್ಯನವರ ಮೇಲೂ ನಮಗೆ ಗೌರವ ಇದೆ. ಅದರೆ ನಾಲ್ವಡಿ ಅವರ ಸಮಾನಕ್ಕೆ ಪ್ರತಿಮೆ ಹಾಕುವುದು ಸರಿ ಇಲ್ಲ ಎಂದು ಭಾರತೀ ಅರಸ್ ತಿಳಿಸಿದರು.

ಸರ್ಕಾರಕ್ಕೂ ಕೂಡ ಈ ವಿಚಾರವಾಗಿ ಮನವಿ ಮಾಡುತ್ತೇನೆ ಹಾಗೂ ನೀರಾವರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರ ಜೊತೆ ಕೂಡ ಇದರ ಬಗ್ಗೆ ಮಾನಾಡುತ್ತೇನೆ ಎಂದು ಅವರು ತಿಳಿಸಿದರು

ಈ ಸಂದರ್ಭದಲ್ಲಿ ಪ್ರೊ.ನಂಜರಾಜೇ ಅರಸ್ , ನಂದೀಶ್ ಅರಸ್, ಅರವಿಂದ್ ಶರ್ಮ , ವಿಜಯರಾಜೇ ಅರಸ್ , ದಿನೇಶ್ ಅರಸ್ , ಶಾಂತರಾಜೇ ಅರಸ್ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: