ಮೈಸೂರು

ಬಾಲಕಾರ್ಮಿಕ ವಿರೋಧಿ ದಿನ : ಚಿಕ್ಕ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ

ಮೈಸೂರು,ಜೂ.12:- ಇಂದು ದೇಶಾದ್ಯಂತ ಬಾಲಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ನಾನೂ ಶಾಲೆಗೆ ಹೋಗಬೇಕು ದೊಡ್ಡ ಆಫೀಸರ್ ಆಗಬೇಕು, ಪೊಲೀಸ್ ಆಗಬೇಕು, ಡಾಕ್ಟರ್ ಆಗಬೇಕು ಎಂದು ಹಲವಾರು ಕನಸುಗಳನ್ನು ಕಟ್ಟಿಕೊಂಡು  ಬಡತನದ ಬೇಗೆಯಲ್ಲಿ ಬೇಯುವ ಅದೆಷ್ಟೋ ಮಕ್ಕಳು ದಿನದ ಹೊಟ್ಟೆ ತುಂಬಿಸಿಕೊಳ್ಳಲು ಮನೆಗೆಲಸ, ಹೋಟೆಲ್ ಗಳಲ್ಲಿ ಕೆಲಸ, ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡು ತಂದೆತಾಯಿಯರಿಗೆ ಅಸರೆಯಾಗಿ ತಮ್ಮ ಕನಸನ್ನು ಅಲ್ಲಿಯೇ ಚಿವುಟಿ ಹಾಕುತ್ತಾರೆ.

ಇಂದಿಗೂ ಕೂಡ ಬಾಲಕಾರ್ಮಿಕರು ಹಲವೆಡೆ ಕಂಡು ಬರುತ್ತಿದ್ದಾರೆ.  ವಿಶ್ವ ಕಾರ್ಮಿಕ ಸಂಘಟನೆಯು 2002ರಲ್ಲಿ ಜೂನ್‌ 12 ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಎಂದು ಘೋಷಿಸಿತು. ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ ದೇಶದ ಉತ್ತಮ ನಾಗರಿಕರಾಗಬೇಕು ಎಂಬುದು ಈ ದಿನದ ಉದ್ದೇಶವಾಗಿದೆ. ಅರ್ಹತೆಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ. ಆದರೂ ಕಾನೂನಿನ ಕಣ್ಣು ತಪ್ಪಿಸಿ ಚಿಕ್ಕ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ.

14ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಅದಕ್ಕಾಗಿ 14ವರ್ಷದೊಳಗಿನ ಮಕ್ಕಳಿಂದ 18ವರ್ಷದೊಳಗಿನ ಮಕ್ಕಳನ್ನು ಯಾರೂ ಕಾರ್ಮಿಕರನ್ನಾಗಿ ಮಾಡಿಕೊಳ್ಳಬೇಡಿ, ಬಾಲಕಾರ್ಮಿಕ ಪದ್ಧತಿಯನ್ನು ಎಲ್ಲರೂ ಒಮ್ಮತದಿಂದ  ವಿರೋಧಿಸಿ,   (ಎಸ್.ಎಚ್)

Leave a Reply

comments

Related Articles

error: