ಮೈಸೂರು

ಮಾ.26 : ವೈಚಾರಿಕ ಚಿಂತನೆ ಕುರಿತ ವಿಚಾರ ಗೋಷ್ಠಿ

ಶರಣ ಸಾಹಿತ್ಯ ಪರಿಷತ್ತು, ಮೈಸೂರು ನಗರ ಘಟಕದ ವತಿಯಿಂದ ಅಂಧಶ್ರದ್ಧೆ ಮತ್ತು ವೈಚಾರಿಕ ಚಿಂತನೆ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು  ಘಟಕದ ಅಧ್ಯಕ್ಷ ಗೊ.ರು. ಪರಮೇಶ್ವರಪ್ಪ ತಿಳಿಸಿದರು.

ಮೈಸೂರು  ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 26 ರಂದು ಜೆ.ಎಸ್.ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕುಂದೂರು ಮಠದ ಪರಮ ಪೂಜ್ಯ ಡಾ. ಶರತ್ ಚಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ,  ಜೆ.ಎಸ್.ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್ಟಸೂರ್ ಮಠ್ ಉದ್ಘಾಟಿಸಲಿದ್ದಾರೆ. ಅಂಧಶ್ರದ್ಧೆ ಮತ್ತು ವೈಚಾರಿಕ ಚಿಂತನೆ ಕುರಿತು ವಿಚಾರ ಗೋಷ್ಠಿ ಜರುಗಲಿದೆ. ವಿಚಾರ ಗೋಷ್ಠಿಯಲ್ಲಿ ಪ್ರೊ.ಬಿ.ವಿ.ವಸಂತಕುಮಾರ್, ಡಾ.ಪ್ರದೀಪ್ ಕುಮಾರ್ ಹೆಬ್ರಿರವರು ತಮ್ಮ ಚಿಂತನೆಯನ್ನು ಹಂಚಿಕೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಚಾಲಕ ನಟರಾಜು,  ಕಾರ್ಯದರ್ಶಿ ಮಹಾದೇವಪ್ಪ, ಗಿರೀಶ್, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: