ಮೈಸೂರು

ಮೈಸೂರಿನಲ್ಲಿಂದು 9ಕೊರೋನಾ ಸೋಂಕು ಪ್ರಕರಣ ಪತ್ತೆ

ಮೈಸೂರು, ಜೂ.12:- ಮೈಸೂರು  ಜಿಲ್ಲೆಯಲ್ಲಿಂದು ಕೊರೋನಾ ವೈರಸ್ ಸೋಂಕು ಪ್ರಕರಣಗಳು 9 ಪತ್ತೆಯಾಗಿವೆ.  ಏಳು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು ಫೆಸಿಲಿಟಿ ಕ್ವಾರೆಂಟೈನ್ ನಲ್ಲಿ ಇದ್ದವರಾಗಿದ್ದಾರೆ

ಒಂದು ತಮಿಳುನಾಡಿನಿಂದ ಹಿಂದಿರುಗಿದವರ ಪ್ರಾಥಮಿಕ ಸಂಪರ್ಕದಲ್ಲಿದ್ದವರು. ಒಬ್ಬರು ಗರ್ಭಿಣಿ ಮಹಿಳೆ ಕೆ.ಆರ್.ಪೇಟೆಯಿಂದ ಕೆ.ಆರ್.ನಗರಕ್ಕೆ ಬಂದಿರುವ ಟ್ರಾವೆಲ್ ಹಿಸ್ಟರಿ ಹೊಂದಿದವರಾಗಿದ್ದಾರೆ. ಈಗ ಮೈಸೂರು ಜಿಲ್ಲೆಯಲ್ಲಿ  ಒಟ್ಟು 19ಪ್ರಕರಣಗಳು ಸಕ್ರಿಯವಾಗಿವೆ.

ಕೆ.ಆರ್.ನಗರ ಪಟ್ಟಣದಲ್ಲಿ 140 ಮನೆಗಳನ್ನು ಒಳಗೊಂಡಂತೆ ಕೊರೋನಾ ಸೋಂಕಿತರ ಮನೆಯ ಸುತ್ತ ಈಗಾಗಲೇ ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: