ಮೈಸೂರು

ಶಿವಶಂಕರ್ ಕುಟುಂಬಕ್ಕೆ ಸಹಾಯ ಹಸ್ತ

ಮೈಸೂರು,ಜೂ.13:- ಇತ್ತೀಚಿಗೆ ಮೈಸೂರಿನ ಗ್ರಾಮಾಂತರ ವಿಭಾಗದಲ್ಲಿ ಪತ್ರಿಕಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಶಿವಶಂಕರ ಅವರು ರಸ್ತೆ ಅಪಘಾತದಲ್ಲಿ ನಿಧನವಾಗಿದ್ದರು,  ಇಂದು ಶಿವಶಂಕರ್ ಅವರ ಕುಟುಂಬಕ್ಕೆ ಕರ್ನಾಟಕ ಪತ್ರಿಕಾ ಬಳಗದ ವತಿಯಿಂದ ಸ್ನೇಹಿತರೆಲ್ಲ ಸೇರಿ ಹಣ ಸಹಾಯ ಮಾಡಿದ್ದಾರೆ.

ನಗರದ ಮೈಸೂರು ಜಿಲ್ಲಾ  ಪತ್ರಕರ್ತರ ಭವನದಲ್ಲಿಂದು ಶಿವಶಂಕರ‌ ಅವರ ತಂದೆ , ತಾಯಿಗಳಾದ ಗೋವಿಂದ ನಾಯಕ , ಸುಮಿತ್ರಾ, ಅವರಿಗೆ 45000 ರೂ.ಗಳ ಚೆಕ್ ಅನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ ಕೆ ಮಹೇಂದ್ರ ಅವರು  ಹಸ್ತಾಂತರಿಸಿದರು, (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: