ನಮ್ಮೂರುಮೈಸೂರು

ಕನ್ನಡ ಭಾಷೆ ಉಳಿಸುವುದು ಪ್ರತಿಯೊಬ್ಬರ ನೈತಿಕ ಹೊಣೆ : ಪ್ರೊ.ಜಿ.ಎಚ್.ನಾಯಕ್

“ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ಇಲ್ಲ. ತನ್ನ ಜೀವನ ವೃತ್ತಿಯನ್ನು ಮಾಡಿ, ಮನೆಯ ಸಂಸಾರವನ್ನು ನಿಭಾಯಿಸುವ ಎರಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾಳೆ”ಎಂದು ವಿಶ್ರಾಂತ ಪ್ರಾಧ್ಯಾಪಕ ಮತ್ತು ಖ್ಯಾತ ನಿರ್ದೇಶಕ ಪ್ರೊ.ಜಿ.ಹೆಚ್. ನಾಯಕ್ ಹೇಳಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಸೆ.28 ರಂದು ಏರ್ಪಡಿಸಿದ್ದ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಂಘದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು, “ಹೆಣ್ಣಿಗೆ ಸಮಾನ ಗೌರವ ಮತ್ತು ಸಮಾನ ಅವಕಾಶ ನೀಡಬೇಕು. ಸಂವಿಧಾನ ಮತ್ತು ಕಾನೂನಿನಲ್ಲಿ ಮಾತ್ರ ಸಮಾನತೆ ಇದೆ. ಆದರೆ ವಾಸ್ತವದಲ್ಲಿ ಇಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

“ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಕನ್ನಡವನ್ನು ಉಳಿಸಿ, ಬೆಳೆಸಿ ನಾಡಿಗೆ ಕೀರ್ತಿ ತರುವಂತಹ ಕೆಲಸ ಮಾಡಬೇಕು. ಕನ್ನಡ ಭಾಷೆ ಒಣಗಿಹೋಗಬಾರದು. ಅದು ಸದಾ ಹಸಿರಿನಿಂದ ಕೂಡಿರಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ಭಾಷೆಯನ್ನು ಬೆಳೆಸಿದ ಮಹನೀಯರ ಕೃತಿಗಳನ್ನು ಓದುವ ಮೂಲಕ ಅವರ ಸೇವೆಯನ್ನು ಸ್ಮರಿಸಿಕೊಳ್ಳಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರೀತಿ ಶ್ರೀಮಂದರ್ ಕುಮಾರ್, ಬೆಂಗಳೂರಿನ ಜೆ.ಡಿ.ಮುಖ್ಯಸ್ಥರಾದ ರಘೋತ್ತಮ್, ಇತಿಹಾಸ ಪ್ರಾಧ್ಯಾಪಕ ಜೆ.ನಾಗರಾಜು, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಮಾ.ವರದರಾಜು, ಸಂಯೋಜಕ ಡಾ.ಬಿ.ವಿ.ವಸಂತಕುಮಾರ್, ಖಜಾಂಚಿ ದೇವಮ್ಮಣ್ಣಿ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: