ಪ್ರಮುಖ ಸುದ್ದಿ
ಹಾಸನ ಮೂಲದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವು
ರಾಜ್ಯ(ಹಾಸನ)ಜೂ.14:- ಕರ್ತವ್ಯದಲ್ಲಿದ್ದ ಹಾಸನ ಮೂಲದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ತಾಲೂಕಿನ ಈಚಲಹಳ್ಳಿ ಗ್ರಾಮದ ಯೋಧ ಹೇಮಂತ್ ಕುಮಾರ್ (42) ಮೃತಪಟ್ಟವರು. ಛತ್ತಿಸಗಡ್ ದ ಸುಕ್ಮಾದಲ್ಲಿ ಕರ್ತವ್ಯದಲ್ಲಿದ್ದಾಗ ಹೇಮಂತ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯೋಧ ಹೇಮಂತ್ ಕುಮಾರ್ ಕಳೆದ 19 ವರ್ಷಗಳಿಂದ ಸಿಆರ್ ಪಿಫ್ ನಲ್ಲಿ ಸೇವೆಸಲ್ಲಿಸುತ್ತಿದ್ದರು. ಸಿ.ಆರ್.ಪಿ.ಎಫ್. 150 ನೇ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಎರಡು ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬರುವುದಾಗಿ ಹೇಮಂತ್ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. (ಕೆ.ಎಸ್,ಎಸ್.ಎಚ್)