ಮೈಸೂರು

ಪೆಪ್ಸಿ-ಕೋಲಾ ಗೆ ಕೋಕ್ ನೀಡಿ : ಎಳನೀರಿಗೆ ಕೈ ನೀಡಿ ವಿಭಿನ್ನ ಆಂದೋಲನ

ಕರ್ನಾಟಕ ಜನಪರ ವೇದಿಕೆ ವತಿಯಿಂದ ಪೆಪ್ಸಿಗೆ ಕೋಕ್ ನೀಡಿ ಎಳನೀರಿಗೆ ಕೈನೀಡಿ  ಎಂಬ ವಿಭಿನ್ನ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಎದುರು ತ್ರೀನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಸಾರ್ವಜನಿಕರಿಗೆ ಎಳನೀರು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನೈಸರ್ಗಿಕವಾಗಿ ಬೆಳೆಯುವ ವಸ್ತುಗಳನ್ನು ಸೇವಿಸಿದಲ್ಲಿ ಆರೋಗ್ಯ ಚೆನ್ನಾಗಿರಲಿದೆ. ಪೆಪ್ಸಿ, ಕೋಲಾಗಳನ್ನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದರು. ವಿದೇಶಿ ಕಂಪನಿಗಳು ಬಂಡವಾಳ ಸುರಿದು ಆರೋಗ್ಯ ಹಾಳುಮಾಡುವ ಪಾನೀಯಗಳನ್ನು ತಯಾರಿಸುತ್ತಿವೆ. ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅವುಗಳಿಗೆ ಮಹತ್ವ ನೀಡದೇ ರೈತರು ಬೆಳೆದ ಎಳನೀರನ್ನು ಸೇವಿಸಿ. ಬರಪರಿಸ್ಥಿತಿ ಎದುರಾಗಿದ್ದು, ರೈತರ ಬೆಳೆಗಳಿಗೆ ಹಾನಿಯುಂಟಾಗಿದೆ. ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಅವರನ್ನು ಸಾಲಸೋಲಗಳಿಂದ ಬಂಧಮುಕ್ತಗೊಳಿಸಲು ಅವರು ಬೆಳೆದ ಎಳನೀರನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಬೇಕು. ಅವರು ಬೆಳೆದ ಕಬ್ಬಿನ ಹಾಲು, ಮಜ್ಜಿಗೆ ನೀರುಗಳನ್ನು ಸೇವಿಸಿ. ಇದರಿಂದ ರೈತರಿಗೂ ನೆರವಾಗಲಿದೆ. ನಮ್ಮ ಆರೋಗ್ಯವೂ ಚೆನ್ನಾಗಿರಲಿದೆ ಎಂದು ತಿಳಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಪೆಪ್ಸಿ, ಕೋಲಾ ತಂಪು ಪಾನೀಯಗಳನ್ನು ರಸ್ತೆಗೆ ಸುರಿದರು. ಅಲ್ಲಿ ಸೇರಿದ ಸಾರ್ವಜನಿಕರಿಗೆ ಎಳನೀರು ಹಾಗೂ ಮಜ್ಜಿಗೆಗಳನ್ನು ನೀಡಿದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: