ಮೈಸೂರು

ಮಾ.25: ಮೈಸೂರು ನಗರ ಆಟೋರಿಕ್ಷಾ ಚಾಲಕರ ಸಂಪರ್ಕ ಕಾರ್ಯಕ್ರಮ

ರೋಟರಿ ಮೈಸೂರು ಪೂರ್ವ, ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181, ವತಿಯಿಂದ ಮೈಸೂರು ನಗರ ಆಟೋರಿಕ್ಷಾ ಚಾಲಕರ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಇಂದಿರಾ ಬಲ್ಲಾಳ್ ತಿಳಿಸಿದರು.

ಮೈಸೂರಿನ  ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 25 ರಂದು ಮಧ್ಯಾಹ್ನ 3.30ಕ್ಕೆ  ಚಾಮರಾಜಪುರಂ ನಲ್ಲಿರುವ ಅರಸು ಬೋರ್ಡೀಂಗ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ರೋಟರಿ ಜಿಲ್ಲೆಯ ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮಾಜಿ ಜಿಲ್ಲಾ ಗವರ್ನರ್ ಎಸ್. ಗುರುರಾಜ್ ಸ್ಟಿಕ್ಕರ್ ಬಿಡುಗಡೆಗೊಳಿಸಲಿದ್ದು, ಉಪಆಯುಕ್ತರಾದ ಎನ್. ರುದ್ರಮುನಿ ಆಶಯ ಭಾಷಣ ಮಾಡಲಿದ್ದಾರೆ.ನಗರದ ಎಲ್ಲಾ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರಿಗೆ ಸ್ಥಳದಲ್ಲಿಯೇ ಉಚಿತ ಮಧುಮೇಹ ಪರೀಕ್ಷೆ ನಡೆಸಿ ಸೂಕ್ತ ಸಲಹೆ ನೀಡಲಾಗುವುದು. ಮೈಸೂರಿನ ಎಲ್ಲಾ ಆಟೋರಿಕ್ಷಾಗಳಿಗೆ ಪ್ರಯಾಣಿಕರನ್ನು ಸ್ವಾಗತಿಸುವ ಹಾಗೂ ಆಟೋ ಚಾಲಕರಿಗೆ ಗೌರವ ನೀಡುವ ಸ್ಟಿಕರ್ ಗಳನ್ನು ವಿತರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಸಹಾಯಕ ಗವರ್ನರ್ ಕೆ.ಜೆ.ಅನಂತರಾಜ್ ಅರಸ್ ,ಸೋಮಶೇಖರ್,  ಕಾರ್ಯದರ್ಶಿ ರೋಹಿತ್ ಸುಬ್ಬಯ್ಯ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: