ಪ್ರಮುಖ ಸುದ್ದಿ

ಮದರ್ ಡೈರಿ ಜೊಮಾಟೊ ಜೊತೆ ಒಪ್ಪಂದಕ್ಕೆ ಸಹಿ : ತಾಜಾ ಹಣ್ಣುಗಳು ಮತ್ತು ತರಕಾರಿ  ಕೂಡ ಮನೆ ಬಾಗಿಲಿಗೆ

ದೇಶ(ನವದೆಹಲಿ)ಜೂ.16:-   ಮದರ್ ಡೈರಿಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ವಿಭಾಗ ‘ಸಫಲ್’ ಜೊಮಾಟೊ ಜೊತೆ ಪಾಲುದಾರಿಕೆ ಹೊಂದಿದ್ದು, ಇದರ ಅಡಿಯಲ್ಲಿ ದೆಹಲಿ-ಎನ್‌ಸಿಆರ್‌ನ ಆಯ್ದ ಸ್ಥಳಗಳಲ್ಲಿ ಗ್ರಾಹಕರಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ವಿತರಿಸಲಾಗುತ್ತಿದೆ.

“ಮೊದಲ ಹಂತದಲ್ಲಿ ಯಶಸ್ವಿಯಾಗಿ  ದೆಹಲಿ-ಎನ್‌ಸಿಆರ್‌ನ ಆಯ್ದ ಸ್ಥಳಗಳಲ್ಲಿನ 11 ಬೂತ್‌ಗಳಿಂದ ವಿತರಣೆಯನ್ನು ಪ್ರಾರಂಭಿಸಿದೆ ಎಂದು ಮದರ್ ಡೈರಿ ಹೇಳಿದೆ. ಈ ಪ್ರದೇಶಗಳಲ್ಲಿನ ಯಶಸ್ವಿ ಬೂತ್‌ಗಳು ಸ್ಟಾಕ್ ಲಭ್ಯತೆಯನ್ನು ಖಚಿತಪಡಿಸುತ್ತದೆ ಮತ್ತು ಜೊಮಾಟೊ ಹಣ್ಣುಗಳು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ. “ಜೋಮಾಟೊ ಅಪ್ಲಿಕೇಶನ್‌ ಮೂಲಕ ಉತ್ಪನ್ನಗಳ  ಆರ್ಡರ್ ಮೂಲಕ ಗ್ರಾಹಕರು ಹೋಂ ಡೆಲಿವರಿಯನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಮದರ್ ಡೈರಿ ಫ್ರೂಟ್ಸ್ ಅಂಡ್ ವೆಜಿಟೇಬಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಹಾರ ಮುಖ್ಯಸ್ಥ ಪ್ರದೀಪ್ ಸಾಹ್, “ಜೊಮಾಟೊ ಸಹಭಾಗಿತ್ವದಲ್ಲಿ ಹೋಂ ಡೆಲಿವರಿ ಆಯ್ಕೆಯನ್ನು   ಪ್ರಾರಂಭಿಸಿದ್ದು, ನಮ್ಮ ಗ್ರಾಹಕರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ನೀಡಲು ನಾವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ 300 ಕ್ಕೂ ಹೆಚ್ಚು ಬೂತ್‌ಗಳನ್ನು ಹೊಂದಿದ್ದು, ದಿನಕ್ಕೆ ಸರಾಸರಿ 270 ಟನ್ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: