ಮೈಸೂರು

ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಬಿದ್ದು ಯುವಕ ಸಾವು

ಮೈಸೂರು,ಜೂ.16:- ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಮೈಸೂರು ತಾಲೂಕು ಹಲಗಯ್ಯನ ಹುಂಡಿಯಲ್ಲಿ ನಡೆದಿದೆ.

ಮೃತರನ್ನು ಹಲಗಯ್ಯನ ಹುಂಡಿ ನಿವಾಸಿ ಮಾಣಿಕ್ಯರಾಜು(18)ಎಂದು ಹೇಳಲಾಗಿದೆ. ಇವರು ತನ್ನ ಗ್ರಾಮದಲ್ಲಿಯೇ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಅಡ್ಡವಾಗಿ ಸಿಕ್ಕಿದ ಕಲ್ಲೊಂದರ ಮೇಲೆ ಬೈಕ್ ಹತ್ತಿಸಿದ್ದು ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: