ಪ್ರಮುಖ ಸುದ್ದಿವಿದೇಶ

ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದ ಚೀನಾ

ಬೀಜಿಂಗ್‌,ಜೂ.16-ಚೀನಾ, ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದಿದೆ. ಭಾರತ-ಚೀನಾ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ಉಲ್ಬಣಕ್ಕೆ ಭಾರತವೇ ಕಾರಣ ಎಂದಿದೆ.

ಗಡಿಭಾಗದಲ್ಲಿ ನಡೆದಿರುವ ಸಂಘರ್ಷದ ಕುರಿತು ಸುದ್ದಿಗೋಷ್ಠಿ ನಡೆಸಿರುವ ಚೀನಾದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಝಾವೋ ಲಿಜಿಯಾಂಗ್‌, ಗಡಿಯಲ್ಲಿ ಅಶಾಂತಿ ಉಂಟಾಗಲು ಭಾರತವೇ ಕಾರಣ. ಭಾರತದ ಸೈನಿಕರೇ ಚೀನಾ ಗಡಿ ದಾಟಿದ್ದರು ಎಂದು ಆರೋಪಿಸಿದ್ದಾರೆ.

ಭಾರತವು ಗಡಿಯಲ್ಲಿ ಸುಮ್ಮನೆ ತಂಟೆ ಮಾಡುತ್ತಿದೆ. ಚೀನಾ ದೇಶ ಭಾರತದೊಂದಿಗೆ ಸಂಘರ್ಷ ಬಯಸುವುದಿಲ್ಲ. ಆದರೆ ಅಗತ್ಯ ಬಂದರೆ, ಸಂಘರ್ಷಕ್ಕೆ ಹೆದರುವುದಿಲ್ಲ. ಭಾರತೀಯ ಸೈನಿಕರು ಚೀನಾ ಗಡಿಯನ್ನು ದಾಟಿದ್ದಾರೆ. ಹೀಗಾಗಿ ಸಂಘರ್ಷ ಉಂಟಾಗಿದೆ ಎಂಬುದಾಗಿ ಭಾರತದ ಮೇಲೆ ಆರೋಪ ಮಾಡಿದೆ.

ಮೇ 5ರಿಂದಲೂ ಭಾರತ- ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ. ಮೇ 5ರಂದು ಲಾಡಾಖ್‌ನ ಪ್ಯಾಂಗ್ಯಾಂಗ್‌ ತ್ಸೋ ಕಣಿವೆಯಲ್ಲಿ ಸಂಘರ್ಷ ನಡೆದಿತ್ತು. ಮೇ 10, 11ರಂದು ಕೂಡ ಪ್ಯಾಂಗ್ಯಾಂಗ್‌ ಕಣಿವೆಯಲ್ಲಿ ಮತ್ತೊಮ್ಮೆ ಸಂಘರ್ಷ ನಡೆದಿತ್ತು. ಮೇ 10 ರಂದು ಸಿಕ್ಕಿಂನ ಮುಗುತಂಗ್‌ ಕಣಿವೆಯಲ್ಲಿ ಕೂಡ ಸಂಘರ್ಷವಾಗಿತ್ತು. ಮೇ 21ರಂದು ಗ್ವಾಲನ್‌ ಕಣಿವೆಯಲ್ಲಿ ಮತ್ತೊಮ್ಮೆ ಘರ್ಷಣೆ ನಡೆದಿದೆ ಎಂಬುದಾಗಿ ಚೀನಾ ವಿದೇಶಾಂಗ ಇಲಾಖೆ ಹೇಳಿಕೊಂಡಿದೆ.

ಗಡಿಯಲ್ಲಿ ಭಾರತ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಚೀನಾ ವಿರೋಧ ಮಾಡಿತ್ತು. ಹೀಗಾಗಿ ಗಾಲ್ವನ್‌ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿತ್ತು ಎಂದು ಹೇಳಿದೆ. (ಎಂ.ಎನ್)

Leave a Reply

comments

Related Articles

error: