ಮೈಸೂರು

ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶ : ಇಬ್ಬರ ಬಂಧನ

 ದಾಖಲೆ ಇಲ್ಲದೆ  ಒಂದು ಲಕ್ಷ ರೂ. ನಗದನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ  ನಗದನ್ನು ವಶಪಡಿಸಿಕೊಂಡು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಘಟನೆ ಹರದನಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಬಂಧಿತರನ್ನು  ಕೇರಳದ ಸುಲ್ತಾನ್ ಬತ್ತೇರಿ ನಿವಾಸಿಗಳಾದ  ಬಾಬು(45) ಹಾಗೂ ಚಾಕೋ(43) ಎಂದು ಗುರುತಿಸಲಾಗಿದೆ.  ಹುಲ್ಲಹಳ್ಳಿ-ಹೊಮ್ಮರಗಳ್ಳಿ ಮುಖ್ಯರಸ್ತೆಯ ಹರದನಹಳ್ಳಿ ಚೆಕ್‍ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಕಾರು ಸಾಗುತ್ತಿದ್ದಾಗ ಬಳಿಗೆ ತೆರಳಿ ಪರೀಕ್ಷಿಸಲಾಗಿ ಯಾವುದೇ ದಾಖಲೆ ಇಲ್ಲದ ಒಂದು ಲಕ್ಷರೂ.ನಗದನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಚುನಾವಣಾ ಸೆಕ್ಟರ್ ಅಧಿಕಾರಿ ಪರಮೇಶ್ವರ್ ನೇತೃತ್ವದ ತಂಡದಿಂದ ಕಾರನ್ನು ವಶಕ್ಕೆ ಪಡೆದಿದೆ.

ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: