ಮೈಸೂರು

ಭೂ  ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷಗಳು ಬಾಯಿ ಬಿಡಬೇಕು : ಬಡಗಲಪುರ ನಾಗೇಂದ್ರ ಒತ್ತಾಯ

ಎರಡನೇ ಹಂತದ ಚಳವಳಿ ಜೂ.21ರಿಂದ 24ರವರೆಗೆ ಭೂ ಸೂಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಎರಡನೇ ಹಂತದ ಚಳವಳಿ

ಮೈಸುರು,ಜೂ.18:- ಭೂ  ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷಗಳು ಬಾಯಿ ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಮೈಸೂರು ಪತ್ರಕರ್ತರ ಸಂಘದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ದೇವರಾಜ ಅರಸು ಅವರು ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆಯನ್ನು ಬಿಜೆಪಿ ಸರ್ಕಾರ ತಿದ್ದುಪಡಿ ಮೂಲಕ ಬುಡಮೇಲು ಮಾಡಿದ್ದಾಗ್ಯೂ ಕಾಂಗ್ರೆಸ್ ಪಕ್ಷದ ಟಿ.ಕೆ.ಶಿವಕುಮಾರ್ ಎಲ್ಲಿಯೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಇದರ ವಿರುದ್ಧ ಹೋರಾಟಕ್ಕೆ ಇಳಿದಿಲ್ಲ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾಗ್ಯೂ ಇದುವರೆಗೆ ಕಾರ್ಯಕ್ರಮ ರೂಪಿಸಲು ಮುಂದಾಗಿಲ್ಲ. ಮಣ್ಣಿನ ಮಗನಾದ ಹೆಚ್ .ಡಿ.ದೇವೇಗೌಡರು ತುಟಿ ಪಿಟಕ್ ಎನ್ನಲಿಲ್ಲ. ಮಣ್ಣಿನ ಮೊಮ್ಮಕ್ಕಲಾದ ಹೆಚ್.ಡಿ.ಕುಮಾರಸ್ವಾಮಿ ರೇವಣ್ಣ ಅವರು ಬಾಯಿ ಬಿಟ್ಟಿಲ್ಲ.  ಈ ಪಕ್ಷದ ಅಧ್ಯಕ್ಷರೂ ಕೂಡ ಪಕ್ಷದ ನಿಲುವನ್ನು ವ್ಯಕ್ತಪಡಿಸಿಲ್ಲ ಇದನ್ನು ನೋಡಿದರೆ ಆಡಳಿತ ಮತ್ತು ವಿರೋಧ ಪಕ್ಷಗಳ ಒಳ ಒಪ್ಪಂದ ಮಾಡಿಕೊಂಡು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡರಬಹುದು ಎಂಬ ಸಂಶಯ ಮೂಡುತ್ತಿದೆ. ವಿರೋಧ ಪಕ್ಷಗಳು ಕೂಡಲೇ ಅವರ ಅಭಿಪ್ರಾಯಗಳನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಒತ್ತಾಯಿಸಿದರು.

ಭೂ ಸೂಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಎರಡನೇ ಹಂತದ ಚಳವಳಿ ಜೂ.21ರಿಂದ 24ರವರೆಗೆ ಎಲ್ಲಾ ಶಾಸಕರು ಉಸ್ತುವಾರಿ ಸಚಿವರ ಸಚಿವರ ಕಛೇರಿ ಮುಂದೆ ಧರಣಿ ನಡೆಸಲಾಗುವುದು. ಅರ್ಧಗಂಟೆ ಧರಣಿ ನಡೆಸಿ ಒತ್ತಾಯ ಪತ್ರವನ್ನು ಸಲ್ಲಿಸಲಾಗುವುದು ಎಂದರು.

ಕರ್ನಾಟಕ ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳು ಎಪಿಎಂಸಿ ಕಾಯ್ದೆ ತಿದ್ದುಪಡಿಗಳು ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗಳು ವಿದ್ಯುತ್ ಕಾಯ್ದೆ ತಿದ್ದುಪಡಿಗಳು ಇವುಗಳಿಂದ  ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಗಳಿಂದ ರಾಜ್ಯದ 500ಜನ ಹೋರಾಟಗಾರರಿಗೆ ಸಂವಾದ ಕಾರ್ಯಕ್ರಮವನ್ನು ವೆಬಿನಾರ್ ಜೂ.20ರಂದು ಹಮ್ಮಿಕೊಳ್ಳಲಾಗಿದೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಶ್ರಯದಲ್ಲಿ ವೆಬಿನಾರ್ ಮೂಲಕ ರಾಜ್ಯ ಮಟ್ಟದ ಸಂವಾದ ನಡೆಸಲು ತೀರ್ಮಾನಿಸಲಾಗಿದ್ದು ಈ ಸಂವಾದದಲ್ಲಿ ಈ ಸಂವಾದದಲ್ಲಿ ಸಮನ್ವಯ ಸಮಿತಿಯ ಸದಸ್ಯ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ  ಸಹ ಭಾಗವಹಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಂ.ಎಸ್.ಅಶ್ವತ್ಥನಾರಾಯಣರಾಜೇ ಅರಸ್, ಹೊಸೂರ್ ಕುಮಾರ್, ಹೋಸಕೋಟೆ ಬಸವರಾಜು, ನೇತ್ರಾವತಿ, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: