ದೇಶಪ್ರಮುಖ ಸುದ್ದಿ

ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆಗೆ 50 ಸಾವಿರ ಕೋಟಿ ರೂ. ಘೋಷಣೆ: ನಿರ್ಮಲಾ ಸೀತಾರಾಮನ್

ನವದೆಹಲಿ,ಜೂ.18-ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆಗಾಗಿ 50 ಸಾವಿರ ಕೋಟಿ ರೂ. ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಜೂ.20 ರಂದು ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆಯನ್ನುಉದ್ಘಾಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಘೋಷಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್ ಅವರು ಯೋಜನೆಯ ವಿವರಗಳನ್ನು ನೀಡಿದ್ದಾರೆ.

ವಲಸೆ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ 125 ದಿನಗಳ ಅವಧಿಯಲ್ಲಿ 50,000 ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ನಿಮಿರ್ಸುವ ಉದ್ದೇಶ ಇದರಲ್ಲಿದೆ. ಇದಕ್ಕಾಗಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್​ ಮತ್ತು ಒಡಿಶಾ ರಾಜ್ಯಗಳ 116 ಜಿಲ್ಲೆಗಳ 25,000ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಆಯ್ಕೆ ಮಾಡಿಕೊಂಡಿದೆ. ಕೆಲಸ ಒದಗಿಸುವ ಮೂಲಕ ಅವರ ಬದುಕಿಗೆ ಒಂದು ದಾರಿ ಮಾಡಿಕೊಡುವ ಉದ್ದೇಶ ಸರ್ಕಾರದ್ದು ಎಂದಿದ್ದಾರೆ.

ಈ ಕಾಮಗಾರಿಗಳೆಲ್ಲವೂ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್​, ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ, ಗಣಿ, ಕುಡಿವ ನೀರು ಮತ್ತು ನೈರ್ಮಲ್ಯ, ಪರಿಸರ, ರೈಲ್ವೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗಡಿ ರಸ್ತೆಗಳು, ಟೆಲಿಕಾಂ, ಕೃಷಿ ಇಲಾಖೆ ಸೇರಿ 12 ವಿವಿಧ ಸಚಿವಾಲಯಗಳ ಸಹಯೋಗದಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಜೂ.20 ರಂದು ಬಿಹಾರದಲ್ಲಿ ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ ಎಂದರು. (ಎಂ.ಎನ್)

 

Leave a Reply

comments

Related Articles

error: