
ಪ್ರಮುಖ ಸುದ್ದಿ
ನಗರಸಭೆಯಿಂದ ಜಾಗೃತಿ ಜಾಥಾ
ರಾಜ್ಯ( ಮಡಿಕೇರಿ) ಜೂ.19 :- ಮಡಿಕೇರಿ ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಗುರುವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ನಗರಸಭೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಭಿತ್ತಿ ಪತ್ರ ಹಿಡಿದು ಮಾಸ್ಕ್ ಧಾರಣೆಯ ಅವಶ್ಯಕತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನಗರಸಭೆ ಪೌರಾಯುಕ್ತರಾದ ಶ್ರೀನಿವಾಸ್ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)