ಮೈಸೂರು

ಕಾರಿನ ಟೈರ್ ಸ್ಪೋಟ : ಕಾರು ಬೆಂಕಿಗಾಹುತಿ

ಕಾರಿನ ಟೈರ್ ಸ್ಪೋಟಗೊಂಡು ಕಾರು ನೆಲಕ್ಕಪ್ಪಳಿಸಿ  ಡೀಸಲ್ ಟ್ಯಾಂಕ್ ಒಡೆದು ಕಾರು ಹೊತ್ತಿ ಉರಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು-ಹುಣಸೂರು ರಸ್ತೆಯ ಇಲವಾಲದ ಬಳಿ ಕಾರು ಚಲಿಸುತ್ತಿದ್ದಂತೆ ಕಾರಿನ ಟೈರ್  ಇದ್ದಕ್ಕಿದ್ದಂತೆ ಸ್ಪೋಟಗೊಂಡಿತು. ಇದರ ಪರಿಣಾಮ ಕಾರಿನಲ್ಲಿದ್ದ ಡೀಸೆಲ್ ಟ್ಯಾಂಕ್ ಒಡೆದು  ಬೆಂಕಿ ಹೊತ್ತಿಕೊಂಡಿದೆ. ಕಾರು ಚಾಲಕ  ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಚಾಲಕನನ್ನು ಬಿಟ್ಟು ಮತ್ತಾರು ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ.  ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಆರಿಸಿದ್ದಾರೆ.  ಇಲಾವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: