ಮನರಂಜನೆ

ಚಿರಂಜೀವಿ ಕುಟುಂಬದ ಏಕೈಕ ನಟಿ ನಿಹಾರಿಕಾ ಮದುವೆ ಫಿಕ್ಸ್: ಹುಡುಗನ ಫೋಟೋ ರಿವೀಲ್

ಹೈದರಾಬಾದ್,ಜೂ.19-ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊನಿಡೆಲ ಅವರ ಮದುವೆ ಫಿಕ್ಸ್ ಆಗಿದೆ. ಈ ಬಗ್ಗೆ ಸ್ವತಃ ನಿಹಾರಿಕಾ ಅವರೇ ಮಾತನಾಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಗನ ಫೋಟೋವನ್ನು ರಿವೀಲ್ ಕೂಡ ಮಾಡಿದ್ದಾರೆ.

ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಅವರ ಮಗಳು ನಿಹಾರಿಕಾ ಅವರ ಮದುವೆ ಪೊಲೀಸ್ ಅಧಿಕಾರಿಯ ಮಗನೊಂದಿಗೆ ನಿಶ್ಚಯವಾಗಿದೆ.

ಗುಂಟೂರಿನ ಐಜಿಪಿ ಜೆ.ಪ್ರಭಾಕರ್ ರಾವ್ ಅವರ ಮಗ ಜೆ.ಚೈತನ್ಯ ಅವರನ್ನು ನಿಹಾರಿಕಾ ಮದುವೆಯಾಗುತ್ತಿದ್ದಾರೆ. ಹೈದರಾಬಾದ್ನಲ್ಲಿ ಹುಟ್ಟಿ ಬೆಳೆದ ಚೈತನ್ಯ, ಭಾರತೀಯ ವಿದ್ಯಾಭವನ್ ಜುಬ್ಲಿ ಹಿಲ್ಸ್ನಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದಾರೆ. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚೈತನ್ಯ, ಹೈದರಾಬಾದ್ ಪ್ರತಿಷ್ಠಿತ ಕಂಪನಿಯಲ್ಲಿ ಬ್ಯುಸಿನೆಸ್ಸ್ಟ್ರಾಟಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ನಿಹಾರಿಕಾ, ನನ್ನ ಜೀವನ ಪೂರ್ತಿ ಕಳೆಯಲು ಬಯಸುವ ಹುಡುಗನನ್ನು ನಾನು ಹುಡುಕಿಕೊಂಡಿದ್ದೇನೆ. ನಾವಿಬ್ಬರೂ ಅಧಿಕೃತವಾಗಿ ಇನ್ನೂ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಾನು ಅಧಿಕೃತವಾಗಿ ಹೇಳಿದ್ದೇನೆ. ನಾನು ನಿಜಕ್ಕೂ ಕ್ಷಣ ತುಂಬ ಥ್ರಿಲ್ ಆಗಿದ್ದೇನೆ. ಈಗ ಹುಡುಗನ ಬಗ್ಗೆ ಜಾಸ್ತಿ ಏನೂ ಹೇಳಲಾಗೋದಿಲ್ಲ ಎಂದಿದ್ದಾರೆ.

ಪ್ರಭಾಕರ್ ರಾವ್ ಅವರು ಹೇಳುವಂತೆ ಇದು ಅರೇಂಜ್ ಮ್ಯಾರೇಜ್. ನಿಹಾರಿಕಾ ಮತ್ತು ಚೈತನ್ಯ ಅವರಿಗೆ ಹಿಂದೆ ಪರಿಚಯ ಇರಲಿಲ್ಲ. ಕಳೆದ ವಾರ ಕುಟುಂಬಸ್ಥರು ಭೇಟಿಯಾಗಿ ಇವರಿಬ್ಬರಿಗೂ ಮದುವೆ ಮಾಡಲು ಪ್ಲ್ಯಾನ್ ಮಾಡಿದೆವು ಎಂದಿದ್ದಾರೆ.

ಆಗಸ್ಟ್ನಲ್ಲಿ ಜೋಡಿ ಅಧಿಕೃತವಾಗಿ, ಸಾಂಪ್ರದಾಯಿಕವಾಗಿ ಉಂಗುರ ಬದಲಾಯಿಸಿಕೊಳ್ಳಲಿದೆ, ಫೆಬ್ರವರಿಯಲ್ಲಿ ಮದುವೆಯಾಗಲಿದೆ.

ಎರಡು ದಿನಗಳ ಹಿಂದೆ ನಿಹಾರಿಕಾ ಇನ್ ಸ್ಟಾಗ್ರಾಮ್ ನಲ್ಲಿ ಮದುವೆಯಾಗುತ್ತಿರುವ ಹುಡುಗನ ಮುಖವನ್ನು ಸರಿಯಾಗಿ ತೋರಿಸದೆ ಫೋಟೋ ಹಾಕಿ ಅಭಿಮಾನಿಗಳಲ್ಲಿ ಕುತೂಹಲ ಕೆರಳುವಂತೆ ಮಾಡಿದ್ದರು. (ಎಂ.ಎನ್)

 

Leave a Reply

comments

Related Articles

error: