ಮೈಸೂರು

ವಿಫಲತೆಯಿಂದಲೇ ಸಫಲತೆಯೆಡೆಗೆ ಮುಖ ಮಾಡಿದರೆ ಯಶಸ್ಸು ಸಾಧ್ಯ : ರಾಜೀವ್ ದುಬೆ

ಎಲ್ಲ ಸಂಸ್ಥೆಗಳಲ್ಲೂ ಏಳುಬೀಳು ಇದ್ದೇ ಇರುತ್ತದೆ. ಯಾವ ಸಂಸ್ಥೆಯೂ ಒಂದೇ ಬಾರಿಗೆ ಯಶಸ್ಸು ಸಾಧಿಸುವುದು ಕಷ್ಟ ಎಂದು ಮಹೀಂದ್ರ ಹಾಗೂ ಮಹೀಂದ್ರ ಕಂಪನಿಯ ಅಧ್ಯಕ್ಷ ರಾಜೀವ್ ದುಬೆ ಹೇಳಿದರು.

ಮೈಸೂರಿನ ಚಾಮುಂಡಿತಪ್ಪಲಿನಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯ 22ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪದವಿ ಪ್ರದಾನಿಸಿ ಮಾತನಾಡಿದರು. ಕೆಲಸ ಮಾಡುವ ಸಂಸ್ಥೆಯೊಳಗೆ ಆಗುವ ವೈಫಲ್ಯಗಳು, ಕಟು ವಿಮರ್ಶೆಗಳ ಕುರಿತು ಭೀತಿ ಇದ್ದಲ್ಲಿ ದೊಡ್ಡ ಸಾಧನೆ ಸಾಧ್ಯವಿಲ್ಲ ಎಂದರು. ಯಶಸ್ಸು ಅಡಗಿರುವುದೇ ವಿಫಲತೆಯಲ್ಲಿ. ವಿಫಲತೆಯಿಂದಲೇ ಸಫಲತೆಯೆಡೆಗೆ ಮುಖ ಮಾಡಬೇಕು ಧೃತಿಗೆಡದೇ ಹೆಜ್ಜೆ ಇಟ್ಟಾಗ ಮಾತ್ರ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಎಂದು ತಿಳಿಸಿದರು.

ನಿರ್ವಹಣಾ ವಿಜ್ಞಾನದ ಸ್ನಾತಕೋತ್ತರ ಡಿಪ್ಲೊಮಾದ 2015-16ನೇ ಸಾಲಿನ 173 ವಿದ್ಯಾರ್ಥಿಗಳಿಗೆ ಹಾಗೂ 2014-15ನೇ ಸಾಲಿನ 5ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ.ಎಚ್.ಗಾಯತ್ರಿ, ಉದ್ಯಮಿ ಆರ್.ಗುರು, ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್, ಡಿ.ಸುರೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

 

Leave a Reply

comments

Related Articles

error: