ಮನರಂಜನೆ

ಇನ್ನು ಮುಂದೆ ಹಣ ನೀಡಲು ಸಾಧ್ಯವಿಲ್ಲವೆಂದು  ಆತ್ಮಹತ್ಯೆಗೆ ಮೂರು ದಿನ ಮುನ್ನ ಸಿಬ್ಬಂದಿಗೆ ಸಂಬಳ ನೀಡಿದ ನಟ ಸುಶಾಂತ್ ಸಿಂಗ್ ರಜಪೂತ್  

ದೇಶ(ನವದೆಹಲಿ)ಜೂ.19:- ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದೊಂದಿಗೆ ಚಿತ್ರೋದ್ಯಮ ಸೇರಿದಂತೆ ಇಡೀ ದೇಶದಲ್ಲಿ ಶೋಕದ ಅಲೆ ಇದೆ. ಅವರ ಸಾವಿಗೆ ಕಾರಣವನ್ನು ಕಂಡುಹಿಡಿಯುವ ಕೆಲಸವನ್ನು ಮುಂಬೈ ಪೊಲೀಸರು ನಡೆಸುತ್ತಿದ್ದಾರೆ. ತನಿಖೆಯ ಸಮಯದಲ್ಲಿ, ಆತ್ಮಹತ್ಯೆಗೆ ಮೂರು ದಿನಗಳ ಮೊದಲು ಸುಶಾಂತ್ ಸಿಂಗ್ ತನ್ನ ಸಿಬ್ಬಂದಿಗೆ  ಸಂಬಳ ನೀಡಿದ್ದರೆಂದು ಮುಂಬೈ ಪೊಲೀಸರಿಗೆ ತಿಳಿದು ಬಂದಿದೆ.

ಮಾಧ್ಯಮವೊಂದರ ವರದಿಯ ಪ್ರಕಾರ, ಮುಂಬೈ ಪೊಲೀಸರು ತನಿಖೆಯ ವೇಳೆ  ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಸಿಬ್ಬಂದಿಗೆ  ಮೂರು ದಿನ ಮೊದಲೇ ಸಂಬಳ ನೀಡಿದ್ದು,ಇನ್ನು ಮುಂದೆ  ಹಣ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಸಿಬ್ಬಂದಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅವರು ತಮ್ಮ ಸಿಬ್ಬಂದಿಗೆ, ‘ನೀವು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀರಿ, ಭವಿಷ್ಯದಲ್ಲಿ ನಾವು ಏನಾದರೂ ಮಾಡುತ್ತೇವೆ’ ಎಂದು ಹೇಳಿದ್ದರು. ಸುಶಾಂತ್ ತನ್ನ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯನ್ ಅವರೊಂದಿಗೆ ಚರ್ಚಿಸುತ್ತಿದ್ದರು . ದಿಶಾ  14 ಕೋಟಿ ರೂ.ಗಳ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ  ಕೊಡಿಸಲುಸುಶಾಂತ್ ಸಿಂಗ್ ಅವರಿಗೆ ಸಹಾಯ ಮಾಡಿದ್ದರು ಎಂದು ಸುಶಾಂತ್ ಸಿಂಗ್ ಅವರ ವ್ಯವಸ್ಥಾಪಕರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: