ಮೈಸೂರು

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಮಂಥನ ಪುಸ್ತಕ ಬಿಡುಗಡೆ ಹಾಗೂ ಆಕರ್ಷಕ ಯೋಗ ಭಂಗಿಗಳ ಪ್ರದರ್ಶನ

ಮೈಸೂರು,ಜೂ.20:- ಮೈಸೂರು ಜಿಲ್ಲಾ ಯೋಗ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಮಂಥನ ಪುಸ್ತಕ ಬಿಡುಗಡೆ ಹಾಗೂ ಆಕರ್ಷಕ ಯೋಗ ಭಂಗಿಗಳ ಪ್ರದರ್ಶನ ಸಮಾರಂಭವನ್ನು ಇಂದು ಏರ್ಪಡಿಸಲಾಗಿತ್ತು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ 2020 ಕ್ಕೆ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಮೈಸೂರು ಜಿಲ್ಲಾ ಯೋಗ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಡಾ . ಪಿ.ಎನ್ . ಗಣೇಶ್‌ಕುಮಾರ್ ಅವರು ರಚಿಸಿರುವ ಯೋಗ ಮಂಥನ ಪುಸ್ತಕ ಬಿಡುಗಡೆ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಯೋಗ ಪಟುಗಳಂದ ಆಕರ್ಷಕ ಯೋಗ ಭಂಗಿಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು,

ಅಂತರಾಷ್ಟ್ರೀಯ ಯೋಗ ತರಬೇತುದಾರರಾದ ಪಿ.ಎನ್ . ಗಣೇಶ್‌ಕುಮಾರ್‌ ಅವರು ರಚಿಸಿರುವ ಯೋಗ ಮಂಥನ ಭಾಗ -1 ಹಾಗೂ ಭಾಗ -2 ಪುಸ್ತಕಗಳನ್ನು ಆಧ್ಯಾತ್ಮ ಚಿಂತಕರಾದ ಸುಚರಿತ ಮಾತಾಜಿಯವರು ಹಾಗೂ ಸರ್ಕಾರಿ ಹೈಟೆಕ್ ಪಂಚಕರ್ಮ ಆಸ್ಪತ್ರೆಯ ಆರ್.ಎಂ.ಓ.ರವರಾದ   ಡಾ.  ಶಶಿರೇಖಾ  ಪುಸ್ತಕವನ್ನು ಬಿಡುಗಡೆ ಮಾಡಿದರು,

ನಂತರ ಅಂತಾರಾಷ್ಟ್ರೀಯ ಯೋಗ ಪಟುಗಳಾದ ಸೌರಭ , ಅಂಕಿತಾ , ವಿಘ್ನೇಶ್ , ವಂಶಿಕಾ , ಸಾಗರಿ , ಧನುಶ್ರೀ , ಮುಕ್ತಾ , ಶೃಜನ್‌ರಾವ್ , ವರ್ಷಾ , ಬ್ರಿಟಿ ಹಾಗೂ ಉಷಾ ಆಕರ್ಷಕ ಯೋಗ ಪ್ರದರ್ಶನ ನೀಡಿದರು,

ಈ ಸಂದರ್ಭದಲ್ಲಿ ಲೇಖಕರು ಹಾಗೂ ಜಿಲ್ಲಾ ಅಧ್ಯಕ್ಷರಾದ ಡಾ , ಪಿ.ಎನ್.ಗಣೇಶ್‌ಕುಮಾರ್‌  , ಕಾರ್ಯದರ್ಶಿ  ಭಾಸ್ಕರ್‌  , ಸಂಘಟನಾ ಕಾರ್ಯದರ್ಶಿ   ಗೀತಾಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: